भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cuvee

ನಾಮವಾಚಕ

ಮದ್ಯಗಳ (ಹದವಾದ) ಮಿಶ್ರಣ, ಬೆರಕೆ.

cuvette

ನಾಮವಾಚಕ

(ರಸಾಯನವಿಜ್ಞಾನ) ತೆಟ್ಟೆಪಾತ್ರೆ; ದ್ರವವನ್ನು ಹಾಕಿಡಲು ಬಳಸುವ ಹೆಚ್ಚು ಆಳವಿಲ್ಲದ ಪಾತ್ರೆ.

CVO

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Commander of the Royal Victorian Order.

cwm

ನಾಮವಾಚಕ

  • coomb ಪದದ ವೆಲ್ಷ್‍ ರೂಪಾಂತರ.
  • = cirque.

cwt

ಸಂಕ್ಷಿಪ್ತ

hundredweight.

cyan

ಗುಣವಾಚಕ

ಹಸಿರುನೀಲಿ ಬಣ್ಣದ.

cyan

ನಾಮವಾಚಕ

ಹಸಿರುನೀಲಿ(ಬಣ್ಣ); ಹಸಿರು ಛಾಯೆಯ ನೀಲಿಬಣ್ಣ.

cyan-

ಸಮಾಸ ಪೂರ್ವಪದ

(ರಸಾಯನವಿಜ್ಞಾನ)

  • ನೀಲ-.
  • ಸಯನ್‍; ಸಯನೋಜನ್‍ ಉಳ್ಳ.

cyanamide

ನಾಮವಾಚಕ

(ರಸಾಯನವಿಜ್ಞಾನ)

  • ಸಯನಮೈಡ್‍; ಸಯನೋಜನ್‍ ಅಮೈಡ್‍; ಬಣ್ಣವಿಲ್ಲದ, ಹರಳುಹರಳಾಗಿರುವ ಆಮ್ೀಯ ಸಂಯುಕ್ತ, ${\rm CNNH}_2$.
  • ಸಯನಮೈಡ್‍; ಸಯನೋಜನ್‍ ಅಮೈಡಿನ ಲವಣ, ಮುಖ್ಯವಾಗಿ ಗೊಬ್ಬರವಾಗಿ ಬಳಸುವ ಇದರ ಕ್ಯಾಲ್ಸಿಯಂ ಲವಣ.

cyanate

ನಾಮವಾಚಕ

(ರಸಾಯನವಿಜ್ಞಾನ) ಸಯನಿಕ್‍ ಆಮ್ಲದ ಲವಣ ಯಾ ಎಸ್ಟರು.

cyanic

ಗುಣವಾಚಕ

  • ನೀಲ(ವರ್ಣದ).
  • (ರಸಾಯನವಿಜ್ಞಾನ) ಸಯನೋಜನ್‍ಗೆ ಸಂಬಂಧಿಸಿದ ಯಾ ಸಯನೊಜನ್‍ ಇರುವ.

cyanic acid

ನಾಮವಾಚಕ

(ರಸಾಯನವಿಜ್ಞಾನ) ಸಯನಿಕ್‍ ಆಮ್ಲ; $0^\circ{\rm C}$ ಗಿಂತ ಕೆಳಗಿನ ತಾಪದಲ್ಲಿ ಮಾತ್ರ ಸ್ಥಿರವಾಗಿ ಉಳಿಯುವ, ವಿಷಕಾರಿಯಾದ, ಬಣ್ಣವಿಲ್ಲದ, ಒಂದು ಪ್ರಬಲ ಆಮ್ಲ, HNCO.

cyanide

ನಾಮವಾಚಕ

(ರಸಾಯನವಿಜ್ಞಾನ) ಸಯನೈಡು:

  • ಹೈಡ್ರೊಸಯನಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು.
  • ಪೊಟ್ಯಾಸಿಯಂ ಯಾ ಸೋಡಿಯಂ ಸಯನೈಡು.

cyanide process

ನಾಮವಾಚಕ

(ಲೋಹವಿದ್ಯೆ) ಸಯನೈಡ್‍ ವಿಧಾನ; ಬೆಳ್ಳಿ ಮತ್ತು ಚಿನ್ನಗಳನ್ನು ಅವುಗಳ ಅದುರಿನಿಂದ ತೆಗೆಯಲು ಸೋಡಿಯಂ ಸಯನೈಡ್‍ ಯಾ ಕ್ಯಾಲ್ಸಿಯಂ ಸಯನೈಡ್‍ ದ್ರಾವಣವನ್ನುಪಯೋಗಿಸುವ ಒಂದು ವಿಧಾನ.

cyanin

ನಾಮವಾಚಕ

(ರಸಾಯನವಿಜ್ಞಾನ) ಸಯನಿನ್‍; ಗುಲಾಬಿ, ಡೇಲಿಯ, ಮುಂತಾದ ಹೂಗಳ ದಳದಲ್ಲಿರುವ ನೇರಳೆ ಬಣ್ಣದ, ಆಂತೋಸಯನಿನ್‍ ಗುಂಪಿನ ವರ್ಣದ್ರವ್ಯ.

cyanine

ನಾಮವಾಚಕ

ಸಯನೀನ್‍; ಹೋಟೋ ಹಿಲ್ಮ್‍ಗಳ ತಯಾರಿಕೆಯಲ್ಲಿ ಬಳಸುವ ರಂಗುಗಳ ಒಂದು ವರ್ಗ.

cyano-

ಸಮಾಸ ಪೂರ್ವಪದ

= cyan-.

cyanocobalamin

ನಾಮವಾಚಕ

ವಿಟಮಿನ್‍ ${\rm B}_{ 12}$.

cyanogen

ನಾಮವಾಚಕ

(ರಸಾಯನವಿಜ್ಞಾನ) ಸಯನೋಜನ್‍; ಬಣ್ಣವಿಲ್ಲದ, ಸುಲಭವಾಗಿ ದಹಿಸುವ, ಕಾರ್ಬನ್‍ ಮತ್ತು ನೈಟ್ರೊಜನ್‍ಗಳ ಸಂಯುಕ್ತವಾದ ಒಂದು ವಿಷಕರ ಅನಿಲ.

cyanometer

ನಾಮವಾಚಕ

ಸಯನಾಮಾಪಕ:

  • (ಮುಖ್ಯವಾಗಿ ಆಕಾಶದ) ನೀಲವರ್ಣವನ್ನು ಅಳೆಯುವ ಉಪಕರಣ.
  • ಯಾವುದೇ ಪದಾರ್ಥದಲ್ಲಿರಬಹುದಾದ ಸಯನೋಜನ್ನಿನ ಯಾ ಸಯನೈಡಿನ ಪ್ರಮಾಣವನ್ನು ನಿರ್ಣಯಿಸುವ ಉಪಕರಣ.

Search Dictionaries

Loading Results

Follow Us :   
  Download Bharatavani App
  Bharatavani Windows App