भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cutlery

ನಾಮವಾಚಕ

 • ಚಾಕುಕತ್ತರಿ ವ್ಯಾಪಾರ; ಮುಖ್ಯವಾಗಿ ಊಟದಲ್ಲಿ ಬಳಸುವ ಚಾಕು, ಮುಳ್ಳುಚಮಚ, ಚಮಚ ಮೊದಲಾದವನ್ನು ಮಾರುವವನು.
 • (ಸಾಮುದಾಯಿಕವಾಗಿ) ಚಾಕುಕತ್ತರಿಗಳು; ಮುಖ್ಯವಾಗಿ ಊಟದಲ್ಲಿ ಬಳಸುವ ಚಮಚ, ಚಾಕು ಮೊದಲಾದವು.

cutlet

ನಾಮವಾಚಕ

 • (ಕುರಿ ಯಾ ಕುರುಮರಿಯ ಕತ್ತಿನ ಮಾಂಸದ) ಬೇಯಿಸಿದ ಯಾ ಕರಿದ ತುಂಡು.
 • ಕರಿಯಲು ಬಳಸುವ ಕರುವಿನ ಮಾಂಸ ಮೊದಲಾದವುಗಳ ಚಿಕ್ಕತುಂಡು.
 • ಅಂಥ ತುಂಡಿನ ಆಕಾರದಲ್ಲಿರುವ ಮಾಂಸದ ಚೂರು ಮೊದಲಾದವುಗಳ ತಿನಿಸು.

cutling

ನಾಮವಾಚಕ

ಚಾಕುಕತ್ತರಿಗಾರಿಕೆ; ಚಾಕುಕತ್ತರಿಗಾರನ ವೃತ್ತಿ.

cutpurse

ನಾಮವಾಚಕ

 • = pickpocket.
 • (ಪ್ರಾಚೀನ ಪ್ರಯೋಗ) ಜೇಬುಗಳ್ಳ; ಗಂಟುಕಳ್ಳ; ನಡುಪಟ್ಟಿಗಳಿಗೆ ಸಿಕ್ಕಿಸಿಕೊಂಡ ಹಣದ ಚೀಲಗಳನ್ನು ಕತ್ತರಿಸಿ ಕದಿಯುತ್ತಿದ್ದವ.
 • ಕಳ್ಳ.

cutter

ನಾಮವಾಚಕ

 • ಕೃತಕ; ಕತ್ತರಿಸುವವನು ಯಾ ಕತ್ತರಿಸುವ ಸಲಕರಣೆ;
 • (ಕತ್ತರಿಸಿ, ಉಜ್ಜಿ ಬೇಕಾದಂತೆ ರೂಪಿಸಬಹುದಾದ ಮೃದುವಾದ) ಉತ್ತಮ ದರ್ಜೆಯ ಇಟ್ಟಿಗೆ.
 • ಯುದ್ಧನೌಕೆ ದೋಣಿ; ಯುದ್ಧನೌಕೆಯಲ್ಲಿರುವ, ಹುಟ್ಟುಹಾಕಿ ಹಾಯಿಗಳ ಸಹಾಯದಿಂದ ನಡೆಸಬಹುದಾದ, ದೋಣಿ.
 • (ಮುಂಭಾಗದಿಂದ ಹೊರ ಚಾಚಿಕೊಂಡಿರುವ ದಿಮ್ಮಿಯುಳ್ಳ, ನೀಳ ಮುಂಗೋಟಿನ, ಚಿಕ್ಕದಾದ) ಒಕ್ಕೂವೆ ಹಡಗು.
 • ಬಾಚಿ ಹಲ್ಲು.
 • ಕೊಲೆಗಡುಕ; ಹತ್ಯಾಕಾರಿ.
 • ಹೆದ್ದಾರಿ–ದರೋಡೆಗಾರ, ಸುಲಿಗೆಕೋರ.
 • (ಗಣಿ)ಅಡ್ಡಬಿರುಕು; ಸ್ತರಗಳನ್ನು ಅಡ್ಡಹಾಯುವ ಬಿರುಕು.
 • ಚುಚ್ಚುಟೀಕೆ; ಮನನೋಯಿಸುವ, ಗಾಸಿಗೊಳಿಸುವ ಟೀಕೆ.
 • ಸಂಬಂಧ, ಸಂಪರ್ಕ–ಕಡಿದುಕೊಂಡವನು.
 • ಪರಿಚಿತನನ್ನು ಬೇಕೆಂದೇ ಗುರುತಿಸದವ.
 • (ಅಮೆರಿಕನ್‍ ಪ್ರಯೋಗ) (ಒಂದು ಕುದುರೆಯನ್ನು ಕಟ್ಟಿದ, ಹಗುರವಾದ) ಜಾರುಗಾಡಿ.
 • ದರ್ಜಿ; ಚಿಪ್ಪಿಗ; ಮುಖ್ಯವಾಗಿ ಅಳತೆ ತೆಗೆದುಕೊಂಡು, ಬಟ್ಟೆ ಕತ್ತರಿಸಿ, ಉಡುಪು ಹೊಲಿಯುವವನು.
 • (ಕ್ರಿಕೆಟ್‍) ತಿರುಗುಚೆಂಡು; ಬೋಲ್‍ ಮಾಡಿದಾಗ ನೆಲಕ್ಕೆ ತಾಗಿದ ಮೇಲೆ ತೀವ್ರ ತಿರುವು ತೆಗೆದುಕೊಳ್ಳುವ ಚೆಂಡು.

cutthroat

ನಾಮವಾಚಕ

 • ಕೊಲೆಗಡುಕ; ಘಾತುಕ; ಕೊಲೆಗಾರ; ಹಂತಕ.
 • (ಅಮೆರಿಕನ್‍ ಪ್ರಯೋಗ) ಕಟ್‍ತ್ರೋಟ್‍; ದವಡೆಯ ಕೆಳಗೆ ಕೆಂಪು ಗುರುತಿರುವ ಟ್ರೌಟ್‍ ಮೀನಿನ ಕುಲ.

cutthroat

ಗುಣವಾಚಕ

 • (ಸ್ಪರ್ಧೆಯ ವಿಷಯದಲ್ಲಿ) ತೀವ್ರ; ಉಗ್ರ; ಬಿರುಸಾದ; ಘಾತಕ: cutthroat competition ತೀವ್ರಸ್ಪರ್ಧೆ; ಘಾತಕ ಪೈಪೋಟಿ.
 • (ಕೆಲವು ತೆರನ ಇಸ್ಪೀಟಾಟಗಳಲ್ಲಿ) ಮುಕ್ಕೈ; ಮೂರುಕೈಗಳ.
 • (ಕ್ಷೌರಕತ್ತಿಯ ವಿಷಯದಲ್ಲಿ) ಹಿಡಿಯಲ್ಲಿ ಜೋಡಿಸಿದ ಉದ್ದವಾದ ಅಲಗಿರುವ.

cutting

ನಾಮವಾಚಕ

ಪದಗುಚ್ಛ

press cutting = 1cutting(5).

 • ಕತ್ತರಿಸುವುದು; ಕತ್ತರಿಸುವಿಕೆ; ಕತ್ತರಣೆ; ಕೃಂತನ.
 • ಕತ್ತರಿಸಿ ತೆಗೆದ ವಸ್ತು ಮೊದಲಾದವು.
 • (ಬ್ರಿಟಿಷ್‍ ಪ್ರಯೋಗ) (ರೈಲು, ರಸ್ತೆ ಮೊದಲಾದವಕ್ಕಾಗಿ ದಿಣ್ಣೆ ಕಡಿದು ಮಾಡಿರುವ) ತೋಡುದಾರಿ; ಗುಡ್ಡ ಕಡಿದ ದಾರಿ.
 • ಕಸಿಕೊಂಬೆ; ಸಸಿಮಾಡಲು ಜೀವಂತ ಮರಗಿಡಗಳಿಂದ ಕತ್ತರಿಸಿದ ಕೊಂಬೆ, ಟೊಂಗೆ, ಬೇರು ಮೊದಲಾದವುಗಳ ತುಂಡು.
 • (ಬ್ರಿಟಿಷ್‍ ಪ್ರಯೋಗ) ಪತ್ರಿಕಾಂಶ; ಪತ್ರಿಕಾಭಾಗ; ವರ್ತಮಾನ ಪತ್ರಿಕೆ ಯಾ ನಿಯತಕಾಲಿಕದಿಂದ ಕತ್ತರಿಸಿ ತೆಗೆದ ವಿಷಯ, ಭಾಗ; ಕಟಿಂಗು.

cutting

ಗುಣವಾಚಕ

 • ಕತ್ತರಿಸುವ; ಹರಿತವಾದ; ಇರಿಯುವ.
 • (ಗಾಳಿ, ಚಳಿ ಮೊದಲಾದವುಗಳ ವಿಷಯದಲ್ಲಿ) ಮೈ–ಕಡಿಯುವ; ಕೊರೆಯುವ.
 • (ಮಾತು, ವ್ಯಂಗ್ಯ ಮೊದಲಾದವುಗಳ ವಿಷಯದಲ್ಲಿ) (ಮನ)ನೋಯಿಸುವ; ಚುಚ್ಚುವ; ಕುಟುಕುವ.
 • (ನೋವು ಮೊದಲಾದವುಗಳ ವಿಷಯದಲ್ಲಿ) ಕತ್ತರಿಸುವ; ತೀಕ್ಷ್ಣ; ಕಟುವಾದ; ತೀವ್ರವಾದ; ಉಗ್ರವಾದ.

cuttingly

ಕ್ರಿಯಾವಿಶೇಷಣ

ಮನನೋಯಿಸುವಂತೆ; ಚುಚ್ಚುವ ಹಾಗೆ; ಮರ್ಮಭೇದಕವಾಗಿ.

cuttle

ನಾಮವಾಚಕ

ಬೆಣಸ; ಕಟ್‍ಲ್‍ಮೀನು; ಅಟ್ಟಿಸಿಕೊಂಡು ಹೋದಾಗ ತಪ್ಪಿಸಿಕೊಳ್ಳಲು ಕಪ್ಪುದ್ರವವನ್ನು ಚಿಮ್ಮುವ, ಸೆಪಿಯ ಕುಲದ, ವಲ್ಕವಂತ ಪ್ರಾಣಿ.

cuttle

ಸಕರ್ಮಕ ಕ್ರಿಯಾಪದ

(ಬಟ್ಟೆಯನ್ನು ನೇಯ್ದ ನಂತರ) ಸಮವಾದ ಎರಡು ಪದರಗಳಾಗುವಂತೆ ಮಡಿಸು.

cuttle-bone

ನಾಮವಾಚಕ

ಸಮುದ್ರದ ನೊರೆ; ಕಡಲನಾಲಗೆ; ಬೆಣಸದ ಎಲುಬು; ಹಲ್ಲು ಮೊದಲಾದವುಗಳಿಗೆ ಹೊಳಪು ಕೊಡಲು ಯಾ ಪಂಜರದ ಹಕ್ಕಿಗೆ ಆಹಾರದ ಜೊತೆಗೆ ನೀಡಲು ಬಳಸುವ, ಕಟ್‍ಲ್‍ ಮೀನಿನ ಒಳ ಸಿಂಪಿ ಯಾ ಚಿಪ್ಪಿನ ಪುಡಿ.

cuttlefish

ನಾಮವಾಚಕ

= 1cuttle.

cutty

ನಾಮವಾಚಕ

 • ಮೋಟು–ಚುಂಗಾಣಿ, ತಂಬಾಕು ಚಿಲುಮೆ.
 • (ಆಡುಮಾತು) ನೀತಿಗೆಟ್ಟವಳು; ಜಾರೆ,
 • ಸಣ್ಣ ಚಮಚ.

cutty

ಗುಣವಾಚಕ

(ಮುಖ್ಯವಾಗಿ ಸ್ಕಾಟ್ಲಂಡ್‍ ಮತ್ತು ಇಂಗ್ಲಂಡಿನಲ್ಲಿ)

 • ಕತ್ತರಿಸಿ ಮೊಟಕು ಮಾಡಿದ; ಬಹಳ ಮೋಟಾದ; ಅತಿ ಮೊಟಕಾದ.
 • ಸಿಡುಕುವ; ಮುಂಗೋಪದ; ರೇಗುವ ಸ್ವಭಾವದ.

cutty-stool

ನಾಮವಾಚಕ

(ಚರಿತ್ರೆ) ಜಾರೆಯ ಪೀಠ; ನಿಂದಾ ಪೀಠ; ಮುಖ್ಯವಾಗಿ ನೀತಿಗೆಟ್ಟವಳನ್ನು ಎಲ್ಲರೆದುರಿಗೂ ಛೀಮಾರಿ ಮಾಡಲು ಹಿಂದಿನ ಕಾಲದ ಚರ್ಚುಗಳಲ್ಲಿ ಕುಳ್ಳಿರಿಸುತ್ತಿದ್ದ ಕಾಲ್ಮಣೆ.

cutwater

ನಾಮವಾಚಕ

 • (ನೀರು ಸೀಳುವ) ಹಡಗಿನ ಮುಂಗೋಟಿನ ಮುಂಭಾಗ.
 • ತಡೆ ಕಟ್ಟೆ; ನೀರಿನ ಸೆಳೆತವನ್ನು ತಡೆಯಲು ಪ್ರವಾಹಕ್ಕೆ ಎದುರಾಗಿ ಮೂಲೆ ಇರುವಂತೆ ಕಟ್ಟುವ, ಸೇತುವೆಯ ಕಂಬದ ಸುತ್ತಲ ಕಟ್ಟೆ.

cutwork

ನಾಮವಾಚಕ

ಕಟ್‍ವರ್ಕ್‍; ಕತ್ತರಿಸಿ ಮಾಡಿದ ಕಸೂತಿ; ಚಿತ್ತಾರದ ಸುತ್ತಲೂ ಕಸೂತಿ ಮಾಡಿ, ಮಧ್ಯದ ಬಟ್ಟೆಯನ್ನು ಕತ್ತರಿಸಿರುವ ಕಸೂತಿ.

cutworm

ನಾಮವಾಚಕ

ಕತ್ತರಿ ಹುಳು; ರಾತ್ರಿಯ ವೇಳೆ ಸಸಿಗಳನ್ನು ನೆಲಮಟ್ಟಕ್ಕೆ ಕತ್ತರಿಸಿಹಾಕುವ, ನಾಕ್ಟುಯಿಡೇ ವಂಶಕ್ಕೆ ಸೇರಿದ, ಕಂಬಳಿ ಹುಳು.

Search Dictionaries

Loading Results

Follow Us :   
  Download Bharatavani App
  Bharatavani Windows App