भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಂಗ್ಯುಲೇಟ

(ಪ್ರಾ) ಗೊರಸು ಪ್ರಾಣಿಗಳ ಗಣ. ಖುರಯುಕ್ತ. ಖುರಯುತ ಪ್ರಾಣಿ

ಅಂಗ್ವಾಂತಿಬೊ

(ಪ್ರಾ) ಕಾಡುಪಾಪವನ್ನು ಹೋಲುವ ಪ್ರಾಣಿ. ಪಶ್ಚಿಮ ಆಫ್ರಿಕದ ಉಷ್ಣವಲಯ ಕಾಡುಗಳಲ್ಲಿ ವೃಕ್ಷವಾಸಿ. ಬಾಲವಿದೆ

ಅಂಚಲ

(ಭೌ) ಬೆಳಕಿನ ವ್ಯತಿಕರಣದಿಂದ ಅಥವಾ ವಿವರ್ತನದಿಂದ ರೂಪುಗೊಂಡ ಕತ್ತಲೆ-ಬೆಳಕು ಪಟ್ಟೆಗಳ ಶ್ರೇಣಿಯಲ್ಲಿ ಯಾವುದೇ ಒಂದು ಪಟ್ಟೆ. ಅಂಚು

ಅಂಚು

(ಸ) ಎಲೆ ದಳದ ವಿಸ್ತೃತ ಮೇಲ್ಭಾಗ.

ಅಂಚು

(ಖ) ಆಕಾಶಕಾಯಗಳ, ವಿಶೇಷವಾಗಿ ಸೂರ್ಯ ಚಂದ್ರರ, ಗೋಚರ ಬಿಂಬಗಳ ಸರಹದ್ದು

ಅಂಚು

(ಭೂ) ನೀರ ಹರಹಿನ ಸುತ್ತಲ ಎಲ್ಲೆ.

ಅಂಚು

(ತಂ) ಚಕ್ರದ ಗುಂಬಕ್ಕೆ ಅರಗಳ ಮೂಲಕ ಸಂಯೋಜಿತವಾದ ಹೊರಭಾಗ. ಪಾತ್ರೆ ಬಾಯಿಯ ಹೊರಸುತ್ತು

ಅಂಚುಕಲ್ಲು

(ಎಂ) ರಸ್ತೆಯ ಅಂಚಿನಲ್ಲಿ ಉದ್ದಕ್ಕೂ ಸಾಲಾಗಿ ನೆಡುವ ಕಲ್ಲು. ಮುಖ್ಯವಾಗಿ ರಾತ್ರಿ ವೇಳೆ ರಸ್ತೆಯ ಅಂಚನ್ನು ಗುರುತಿಸಲು ಸಹಾಯಕವಾಗುವುದಲ್ಲದೆ, ವಾಹನಗಳ ಓಟದ ಪ್ರಭಾವದಿಂದಾಗಿ ರಸ್ತೆಯು ಅಂಚಿನಲ್ಲಿ ಹರಡಿಕೊಳ್ಳದಂತೆ, ಕುಸಿಯದಂತೆ ರಕ್ಷಿಸುತ್ತದೆ. ಇದಕ್ಕೆ ಕಾಂಕ್ರೀಟೂ ಬಳಕೆಯಲ್ಲಿದೆ

ಅಂಜೂರ

(Ficus carica) (ಸ) ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಏಷ್ಯ ಮೈನರ್ ನಲ್ಲಿರುವ ಕ್ಯಾರಿಕ ಇದರ ತವರು. ಇದರ ಹಣ್ಣುಗಳಲ್ಲಿ ಅನೇಕ ಪೋಷಕಾಂಶಗಳಿವೆ. ಹಣ್ಣಿನಲ್ಲಿ ಶೇ. ೮೪ ಭಾಗ ತಿರುಳು. ಕಬ್ಬಿಣ, ತಾಮ್ರ ಮತ್ತು ಎ,ಬಿ,ಸಿ,ಡಿ ವೈಟಮಿನ್‌ಗಳು ಹೇರಳವಾಗಿವೆ

ಅಂಟು ತುದಿಗಳು

(ವೈ) ನಿರ್ಬಂಧಿತ ಕಿಣ್ವಗಳಿಂದ ತುಂಡರಿಸಿದ ಡಿಎನ್‌ಎ ಅಣುವಿನ ಅಂಟು ತುದಿ. ಇಂತಹ ತುದಿಗಳನ್ನು ಅದೇ ನಿರ್ಬಂಧಿತ ಕಿಣ್ವ ಬಳಸಿ ತುಂಡರಿಸಿದ

ಅಂಟುತುರಿ

(ವೈ) ಸ್ಟಫೈಲೊಕಾಕೈ ಅಥವಾ ಸ್ಟ್ರಪ್ಟೋಕಾಕೈ ಬ್ಯಾಕ್ಟೀರಿಯಾಗಳಿಂದ ತಲೆದೋರುವ ಚರ್ಮದ ಮೇಲೆ ಕೀವುಗುಳ್ಳೆ ರೂಪದ ತೀವ್ರ ಸೋಂಕು. ಆರಂಭದಲ್ಲಿ ನೀರು ತುಂಬಿದ ಗುಳ್ಳೆಗಳಿದ್ದು, ಅನಂತರ ಅವು ಒಡೆದು ಹಳದಿ ಬಣ್ಣದ ಹೆಪ್ಪಳಿಕೆಗಟ್ಟುತ್ತವೆ. ಇದು ಸಾಮಾನ್ಯವಾಗಿ ಮುಖ ಮತ್ತು ಕೈಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇಂಪೆಟಿಗೊ

ಅಂಟುಪ್ಲಾಸ್ತ್ರಿ

(ವೈ) ಒಂದು ಪಕ್ಕದಲ್ಲಿ ಅಂಟು ಲೇಪಿಸಿರುವ ಹತ್ತಿ, ಕಾಗದ, ಪ್ಲಾಸ್ಟಿಕ್ ಪಟ್ಟಿ; ಗಾಯದ ಮೇಲೆ ಅಂಟಿಸಲು ಇಲ್ಲವೇ ಅದಕ್ಕೆ ಕಟ್ಟಿದ ಪಟ್ಟಿಯನ್ನು ಆ ಸ್ಥಳದಲ್ಲಿ ಬಿಗಿಯಾಗಿ ಹಿಡಿದಿಡಲು ಬಳಸುವ ಬಂಧಕ. ಆಸಂಜನ ಬಂಧಕ, ಅಂಟುಪಟ್ಟಿ

ಅಂಟುರೋಗ

(ವೈ) ಗಾಳಿ, ನೀರು ಮೊದಲಾದವುಗಳಿಂದ ಯಾವುದೇ ವ್ಯಕ್ತಿಯ ಶರೀರ ಹೊಕ್ಕು ಅನಂತರ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತ ಹೋಗುವ ರೋಗ. ಸಾಂಕ್ರಾಮಿಕ ರೋಗ

ಅಂಡ್‌ಗೇಟ್ AND

(ಕಂ) ಎಲ್ಲ ಇನ್‌ಪುಟ್(ನಿವೇಶ)ಗಳೂ ಏಕಕಾಲಿಕವಾಗಿ ಶಕ್ತೀಕರಿಸಲ್ಪಟ್ಟಾಗ ಮಾತ್ರ ಔಟ್‌ಪುಟ್ (ನಿರ್ಗಮ) ಸಂಜ್ಞೆಯನ್ನು ಉತ್ಪಾದಿಸುವ ದ್ವಾರ; ಅಂದರೆ ಇನ್‌ಪುಟ್ ಸಂಜ್ಞೆಗಳೆಲ್ಲವೂ ೧ ಆದಾಗ ಮಾತ್ರ ಔಟ್‌ಪುಟ್ ಸಂಜ್ಞೆ ೧ ಆಗುವುದು

ಅಂಡ

(ಜೀ) ಅಂಡಕದಿಂದ ಮೈಯೋಸಿಸ್ (ಅರೆ ವಿದಳನ) ಮೂಲಕ ಉತ್ಪತ್ತಿಯಾದ ಸ್ತ್ರೀಯುಗ್ಮಕ. ಪುಲ್ಲಿಂಗ ಕೋಶಕ್ಕೆ ಹೋಲಿಸಿದರೆ ದೊಡ್ಡ ಗಾತ್ರದ ಮತ್ತು ಚಲನೆ ಇರದ ಸ್ತ್ರೀಲಿಂಗ ಕೋಶ. ಪುಲ್ಲಿಂಗ ಕೋಶದೊಂದಿಗೆ ಕೂಡಿದ ಅನಂತರ ಹೊಸ ಜೀವಿಯಾಗಿ ಅಭಿವರ್ಧಿಸುವ ಗುಣವುಳ್ಳದ್ದು. ಗೋಳಾಕಾರ. ವೈಟಲೀನ್ (ಪೀತಕ) ಪೊರೆಯಿಂದ (ಭ್ರೂಣಾವರಣ) ಆವೃತವಾಗಿರುವುದು. ಅಂಡಕೋಶ

ಅಂಡಕ

(ಜೀ) ಬೀಜಸಸ್ಯಗಳಲ್ಲಿ ಶಲಾಕೆಗೆ ಲಗತ್ತಾಗಿರುವ ಒಂದು ರಚನೆ. ಇದರೊಳಗೆ ಸ್ತ್ರೀಕೋಶವಿರುವುದು. ಫಲೀಕರಣಾ ನಂತರ ಈ ಕೋಶ ಬೀಜವಾಗುವುದು. (ಪ್ರಾ) ಅಭಿವರ್ಧನೆಯ ಆರಂಭ ಘಟ್ಟಗಳಲ್ಲಿರುವ ಅಂಡ ಅಥವಾ ಬೀಜ

ಅಂಡಜನನ

(ಪ್ರಾ) ಗರ್ಭಾದಾನಕ್ಕೆ ಸಿದ್ಧತೆಯಾಗಿ ಅಂಡ ಬೆಳೆಯುವ ಹಾಗೂ ಪಕ್ವಗೊಳ್ಳುವ ಪ್ರಕ್ರಿಯೆ

ಅಂಡಜ ಸ್ತನಿ

(ಪ್ರಾ) ಮೊಟ್ಟೆ ಇಡುವ ಕೆಳವರ್ಗದ ಸ್ತನಿ. ಇವುಗಳಲ್ಲಿ ಮೂತ್ರನಾಳ, ಯೋನಿ, ಜೀರ್ಣಾಂಗ ಇವೆಲ್ಲಕ್ಕೂ ಒಂದೇ ದ್ವಾರವಿದ್ದು ಕೆಳಮಟ್ಟದ ವಿಕಾಸಕ್ಕೆ ನಿದರ್ಶನ. ಏಕದ್ವಾರಿ

ಅಂಡನಾಳ

(ಪ್ರಾ) ಅಂಡಾಶಯದ ಒಳಗಿನಿಂದ ಹೊರಕ್ಕೆ ಅಥವಾ ಗರ್ಭಾಶಯದೊಳಕ್ಕೆ ಚಾಚಿಕೊಂಡಿರುವ ನಾಳ. ಇದರ ಮೂಲಕ ಅಂಡಗಳು ವಿಸರ್ಜನೆಯಾಗುತ್ತವೆ.

ಅಂಡಲೂಸೈಟ್

(ಭೂವಿ) ಅಲ್ಯೂಮಿನಿಯಮ್ ಸಿಲಿಕೇಟಿನ ಮೂರು ಸ್ಫಟಿಕಾತ್ಮಕ ಖನಿಜಗಳ ಪೈಕಿ ಒಂದು. Al2siO5. ಸಮಚತುರ್ಭುಜಿ, ಕಯನೈಟ್ ಮತ್ತು ಸಿಲ್ಲಿಮನೈಟ್ ಉಳಿದೆರಡು ಖನಿಜಗಳು

Search Dictionaries

Loading Results

Follow Us :   
  Download Bharatavani App
  Bharatavani Windows App