भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567Next >

ಡಯಟೋನಿಕ್ ಸ್ವರಗ್ರಾಮ

(ಭೌ) ಸ್ವರಗ್ರಾಮವನ್ನು ಅಥವಾ ಸ್ವರಾಷ್ಟಕವನ್ನು ಅನುಕೂಲತೆಯ ಸಲುವಾಗಿ ಎರಡು ವಿಭಿನ್ನ ಸ್ವರಗುಂಪುಗಳಾಗಿ ವಿಭಾಗಿಸುವುದು

ಡಯಥೆರ್ಮಿ

(ವೈ) ಉಚ್ಚ ಆವೃತ್ತಿಯ ವಿದ್ಯುತ್ ಪ್ರವಾಹವನ್ನು ಹಾಯಿಸಿ ದೇಹದ ಊತಕಗಳನ್ನು ಕಾಸಿ ನೀಡುವ ವೈದ್ಯಕೀಯ ಚಿಕಿತ್ಸಾ ವಿಧಾನ. ಭೌತಚಿಕಿತ್ಸೆ ನೀಡುವಾಗ ಈ ವಿಧಾನ ದಿಂದ ಚರ್ಮದಡಿಯ ಮಾಂಸಖಂಡಗಳನ್ನೂ ಕೀಲುಗಳನ್ನೂ ಕಾಸ ಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸುವಾಗ ಈ ವಿಧಾನವನ್ನು ಸ್ಥಳೀಯವಾಗಿ ಅನ್ವಯಿಸುವ ಮೂಲಕ ರಕ್ತ ಗರಣೆ ಕಟ್ಟುವಂತೆ, ಊತಕ ನಶಿಸುವಂತೆ (ನೆಕ್ರೋಸಿಸ್) ಮಾಡಲಾಗುತ್ತದೆ. ವಿದ್ಯುದುಷ್ಣ ಚಿಕಿತ್ಸೆ. ತೂರುಗಾವು

ಡಯಲ್ಲೇಜ್

(ಭೂವಿ) ಗ್ಯಾಬ್ರೊ ಮುಂತಾದ ಪ್ರತ್ಯಾಮ್ಲೀಯ ಅಗ್ನಿಶಿಲೆಗಳಲ್ಲಿರುವ ಮಾನೊಕ್ಲೈನ್ ಗಣದ ಪರಿವರ್ತಿತ ಪೈರಾಕ್ಸೀನ್ ಖನಿಜ. ರಾಸಾಯನಿಕವಾಗಿ ಅಗೈಟ್/ಡಯಾಪ್ಸೈಡನ್ನು ಹೋಲುತ್ತದೆ

ಡಯಸ್ಟೇಸ್

(ರ) ಪಿಷ್ಟವನ್ನು ಶರ್ಕರವಾಗಿ ಮಾರ್ಪಡಿಸುವ ಕಿಣ್ವ. ಪಿಷ್ಟವನ್ನು ಜಲವಿಭಜಿಸಿ ಡೆಕ್‌ಸ್ಟ್ರಾನ್ ಮತ್ತು ಮಾಲ್ಟೋಸ್ ಗಳಾಗಿ ಪರಿವರ್ತಿಸಬಲ್ಲ ಕಿಣ್ವ

ಡಯಾಕಾಂತೀಯತೆ

(ಭೌ) ಕಾಂತೀಯ ಪ್ರವೃತ್ತಿ ತುಸು ನಿಷೇಧಾತ್ಮಕವಾಗಿರುವ ಪದಾರ್ಥದ ಗುಣ. ಅಂದರೆ, ಈ ಪದಾರ್ಥವು ಅದನ್ನು ಕಾಂತೀಕರಿಸುವ ಬಲವನ್ನು ವಿರೋಧಿಸುತ್ತದೆ. ಅದರ ಕಾಂತೀಯ ಪಾರಕತೆ ನಿರ್ದ್ರವ್ಯತೆಯ ಕಾಂತೀಯ ಪಾರಕತೆಗಿಂತ ಕಡಿಮೆ ಇರುತ್ತದೆ. ಪಾರಕಾಂತೀಯತೆ

ಡಯಾಪ್ಟರ್

(ಭೌ) ಮಸೂರದ ಇಲ್ಲವೇ ಪಟ್ಟಕದ ಸಾಮರ್ಥ್ಯ ಮಾನ. ಪ್ರತೀಕ d. ಇದರ ಬೆಲೆ ಮೀಟರ್‌ಗಳಲ್ಲಿ ಅಳೆದಂತೆ, ನಾಭೀದೂರದ ವ್ಯುತ್ಕ್ರಮ. ಉದಾಹರಣೆ : ನಾಭೀ ದೂರ ೦.೫ ಮೀಟರ್ ಇರುವ ಮಸೂರದ ಸಾಮರ್ಥ್ಯ ೧/೦.೫=೨. ಅಭಿಸರಣ ಮಸೂರದ ಸಾಮರ್ಥ್ಯವನ್ನು ಸಾಧಾರಣವಾಗಿ ಧನಾತ್ಮಕವೆಂದೂ ಅಪಸರಣ ಮಸೂರದ್ದನ್ನು ಋಣಾತ್ಮಕವೆಂದೂ ಭಾವಿಸುವುದು ವಾಡಿಕೆ

ಡಯಾಫಿಸಿಸ್

(ಸ) ಹೂಗೊಂಚಲಿನ ಪ್ರಧಾನ ಕಾಂಡದ ಅಪಸಾಮಾನ್ಯ ದೀರ್ಘ ಬೆಳವಣಿಗೆ. (ಪ್ರಾ) ಅಂಗವೊಂದರ ಉದ್ದವಾದ ಮೂಳೆಯ ಮಧ್ಯಭಾಗ. ಅಸ್ಥಿಕಾಂಡ

ಡಯಾಬೇಸ್

(ಭೂವಿ) ಡಾಲೆರೈಟ್ ಶಿಲೆಗೆ ಅಮೆರಿಕನ್ ಹೆಸರು. ನೋಡಿ: ಡಾಲೆರೈಟ್

ಡಯಾಶ್ಚಿಸ್ಟಿಕ್

(ಭೂವಿ) ಒಂದೇ ತಪ್ತ ದ್ರವರಾಶಿಯಿಂದ ದೊರೆತ ಎರಡು ವಿಭಿನ್ನ ಅಗ್ನಿಶಿಲೆಗಳಿಗೆ ಸಂಬಂಧಿಸಿದ

ಡಯೊರೈಟ್

(ಭೂವಿ) ಕಣೀಯ ಒಳರಚನೆ ಇದ್ದು ಅಧಿಕ ಪ್ರಮಾಣದಲ್ಲಿ ಪ್ಲೇಜಿಯೋಕ್ಲೇಸ್ ಫೆಲ್ಡ್‌ಸ್ಪಾರ್‌ನಿಂದಲೂ ಅಲ್ಪ ಪ್ರಮಾಣಗಳಲ್ಲಿ ಕಪ್ಪುಬಣ್ಣದ ಖನಿಜಗಳಿಂದಲೂ ರೂಪುಗೊಂಡ ಮತ್ತು ಕಣಪೂರ್ಣ ಸುಲಭವಾಗಿ ಗೋಚರಿಸುವ ಪ್ಲೂಟಾನಿಕ್ ಶಿಲೆ

ಡಯೋಡ್

(ಭೌ) ತಪ್ತ ಕ್ಯಾಥೋಡ್ ಮತ್ತು ಆನೋಡ್ ಇರುವ ಅತಿಸರಳ ಎಲೆಕ್ಟ್ರಾನ್ ನಳಿಕೆ. ಇದಕ್ಕೆ ಏಕದಿಶಾತ್ಮಕ ಗುಣವಿದೆ. ಈ ಕಾರಣದಿಂದಾಗಿ ದಿಷ್ಟಕಾರಿ (ರೆಕ್ಟಿಫಯರ್)ಯಾಗಬಲ್ಲುದು. ಇವೇ ಗುಣವಿರುವ ಅರೆವಾಹಕ ಸಾಧನ. ರೇಡಿಯೊ ಅಭಿಗ್ರಹಣದಲ್ಲಿ ಬಳಕೆ

ಡರ್ಮಾಟೊಫೈಟ್

(ವೈ) ಮನುಷ್ಯ ಮತ್ತು ಪ್ರಾಣಿಗಳಲ್ಲಿ ಚರ್ಮರೋಗ ತರುವ ಒಂದು ಪರಾವಲಂಬಿ ಬೂಷ್ಟು. (ತ್ವಚೆ ಬೂಷ್ಟು). ಉದಾ: ಹುಳುಕಡ್ಡಿ , ಗಜಕರ್ಣ

ಡರ್ಮಿಸ್

(ವೈ) ಒಳಚರ್ಮ. ಚರ್ಮವನ್ನು ಹೊರ ಚರ್ಮ (epidermis) ಒಳಚರ್ಮ ಹಾಗೂ ಚರ್ಮದ ಕೆಳ ಊತಕ ಮಾಲ್ಪೀಗಿಯನ್ ಸ್ತರ (subcutaneous tissue) ಎಂದು ಕರೆಯುವುದುಂಟು. ನಡುವಿನದಾದ ಒಳಚರ್ಮವು, ನಿಜವಾದ ಚರ್ಮ. ಇದು ಚರ್ಮದ ಮುಖ್ಯ ಭಾಗಗಳನ್ನು (ರೋಮ ಕೂಪ, ತೈಲಗ್ರಂಥಿ, ಸ್ವೇದ ಗ್ರಂಥಿ, ನರಾಗ್ರಗಳು ಇತ್ಯಾದಿ) ಒಳಗೊಂಡಿದೆ. ನೋಡಿ : ಅಧಿಚರ್ಮ

ಡರ್ಮೊಸ್ಕೆಲಿಟನ್

(ಪ್ರಾ) ಅನೇಕ ಅಕಶೇರುಕ ಮತ್ತು ಕೆಲವು ಕಶೇರುಕ ಪ್ರಾಣಿಗಳಲ್ಲಿ ಕಾಣಬರುವ ಗಡಸಾದ ಕೊಂಬು, ಮೂಳೆ ಮುಂತಾದವುಗಳಿಂದ ರಚಿತವಾದ ಸಂರಕ್ಷಕ ಹೊರಹೊದಿಕೆ ಅಥವಾ ಕವಚ. ಉದಾ : ಹುರುಪೆ, ಫಲಕ, ಉಗುರು, ಗರಿ, ಚಿಪ್ಪು ಇತ್ಯಾದಿ. ನೋಡಿ : ಮಾಲ್ಪೀಘಿಯನ್ ಪದರ. ಬಹಿರ್‌ಕಂಕಾಲ

ಡಾಕ್ಟರ್ ದ್ರಾವಣ

(ರ) ಪೆಟ್ರೋಲಿಯಮ್ ವಸ್ತು ಗಳಿಂದ ಗಂಧಕದ ವಾಸನೆಯನ್ನು ತೆಗೆದುಹಾಕಲು ಬಳಸುವ ಸೋಡಿಯಮ್ ಪ್ಲಂಬೈಟ್ ದ್ರಾವಣ

ಡಾಕ್ಟಿಲೊ ಜೂಯಾಯ್ಡ್

(ಪ್ರಾ) ಮಿಲ್ಲಿಪೋರ್ನಿಯ ಗಣಕ್ಕೆ ಸೇರಿದ ಹವಳಗಳು

ಡಾಕ್ಟಿಲ್

(ಪ್ರಾ) ಬೆರಳು, ಅಂಗುಲಿ

ಡಾಗ್

(ತಂ) ಎರಡು ವಸ್ತುಗಳನ್ನು ಬಿಗಿಯಾಗಿ ಹಿಡಿದು ಕೊಳ್ಳಲು ಉಪಯೋಗಿಸುವ ಉಕ್ಕಿನ ಸಾಧನ. ಬಿಗಿಣಿ

ಡಾಫಡಿಲ್

(ಸ) ವಸಂತ ಕಾಲದಲ್ಲಿ ಅರಳುವ, ತುತ್ತೂರಿ ಆಕಾರದ ನಸುಹಳದಿ ಹೂ ಬಿಡುವ ಗೆಡ್ಡೆ ಸಸ್ಯ. ವೇಲ್ಸ್‌ನ ರಾಷ್ಟ್ರೀಯ ಲಾಂಛನ. ನೆಲ ನೈದಿಲೆ

ಡಾಂಬರು

(ಎಂ) ಪೆಟ್ರೋಲಿಯಂಅನ್ನು ಪರಿಷ್ಕರಿಸುವಾಗ ದೊರೆಯುವ ಚರಟ. ರಸ್ತೆ ನಿರ್ಮಾಣದಲ್ಲಿ, ಜಲಾಭೇದ್ಯ ಪದರು ಗಳ ಮತ್ತು ಕ್ಷಯನಿರೋಧಿ ಪೆಯಿಂಟುಗಳ ತಯಾರಿಕೆಯಲ್ಲಿ ಬಳಕೆ
< previous1234567Next >

Search Dictionaries

Loading Results

Follow Us :   
  Download Bharatavani App
  Bharatavani Windows App