भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous123Next >

ಘಟ

(ಸಾ) ನೋಡಿ : ಶವ

ಘಟಕ ಚಿತ್ರ

(ಕಂ) ಕಂಪ್ಯೂಟರ್‌ನ ಯಂತ್ರಾಂಶ (ಹಾರ್ಡ್‌ವೇರ್) ಹಾಗೂ ತಂತ್ರಾಂಶ (ಸಾಫ್ಟ್‌ವೇರ್)ಗಳನ್ನೂ ಇವುಗಳ ಅಂತರಸಂಯೋಜನೆಗಳನ್ನೂ ಸೂಚಿಸುವ ಚೌಕ, ಆಯತ ಹಾಗೂ ಸರಳರೇಖೆಗಳ ಕೂಟ

ಘಟಕ ವಿವರಗಳು

(ಸಾ) ಸಮಸ್ಯೆಯನ್ನು ರೂಪಿಸುವ ಮುಖ್ಯ ಅಂಶಗಳನ್ನು ಕುರಿತ ಮಾಹಿತಿ

ಘಟನಾ ಕ್ಷಿತಿಜ

(ಖ) ಕೃಷ್ಣವಿವರದ ಈ ಮಿತಿ ಯೊಳಗಿಂದ ಬೆಳಕು ಹೊರಕ್ಕೆ ಹಾಯದು. ನೋಡಿ : ಕೃಷ್ಣ ವಿವರ

ಘಟನೆ

(ಭೌ) ಅವಕಾಶದ (ಸ್ಪೇಸ್) ಮೂರು ನಿರ್ದೇಶಕಾಂಗ ಗಳಿಂದಲೂ (ಉದ್ದ, ಅಗಲ, ಎತ್ತರ) ಕಾಲದ ಒಂದು ನಿರ್ದೇಶಕಾಂಗದಿಂದಲೂ ಅವಕಾಶ-ಕಾಲ ಸಾತತ್ಯದಿಂದಲೂ ಯಾವುದೇ ಬಿಂದುವಿನಲ್ಲಿ ಪ್ರತಿನಿಧಿಸಲ್ಪಡುವ ಭೌತ ವಾಸ್ತವತೆ. ಅವಕಾಶ-ಕಾಲ ಸಂಯೋಗ. ಸೂರ್ಯೋದಯ ಎಂಬ ಘಟನೆಯಲ್ಲಿ ಮೂಡಿದ ನೆಲೆ (ಅವಕಾಶ) ಮತ್ತು ಕ್ಷಣ (ಕಾಲ) ನಿಹಿತವಾಗಿವೆ. (ಗ) ಯಾವುದೇ ಪ್ರಯೋಗದಲ್ಲಿ ಒದಗಬಹುದಾದ ವಿಭಿನ್ನ ಸಾಧ್ಯತೆಗಳಲ್ಲಿ ಪ್ರತಿಯೊಂದರ ಹೆಸರು. ಘನದ ಆರು ಮುಖಗಳನ್ನು ೧ರಿಂದ ೬ರವರೆಗೆ ಸಂಖ್ಯೆಯಲ್ಲಿ ಬರೆಯೋಣ. ಇಂಥ ಎರಡು ಘನಗಳನ್ನು ಪಗಡೆ ದಾಳಗಳಂತೆ ಯಾದೃಚ್ಛಿಕವಾಗಿ ಎಸೆಯುತ್ತ ಹೋಗೋಣ. ಆಗ ದೊರೆಯುವ ೩೬ ಜೋಡಣೆಗಳು (೧,೧), (೧,೨), (೧,೩), (೧,೪), (೧,೫), (೧,೬), (೨,೧)… (೬,೬). ಈ ಒಂದೊಂದು ಜೋಡಣೆಯೂ ಒಂದೊಂದು ಘಟನೆ

ಘಂಟಾಕೋನ

(ಖ) ಆಕಾಶಕಾಯದ ಘಂಟಾವೃತ್ತಕ್ಕೂ ದಕ್ಷಿಣೋತ್ತರಕ್ಕೂ ನಡುವಿನ ಕೋನ

ಘಂಟಾರೂಪಿ

(ಜೀ) ಗಂಟೆಯಂತೆ ಆಕಾರ ವಿರುವ (ಪ್ರಾಣಿ, ಸಸ್ಯ, ಸಸ್ಯಭಾಗ)

ಘಟ್ಟ

(ಭೂವಿ) ಭೂವೈಜ್ಞಾನಿಕ ‘ಕಾಲ’ವೊಂದರಲ್ಲಿ ನಿಕ್ಷೇಪಗೊಂಡ ಶಿಲಾ ಶ್ರೇಣಿ

ಘಟ್ಟಗಳು

(ಭೂ) ದಕ್ಷಿಣ ಭಾರತದ ಪೂರ್ವ ಮತ್ತು ಪಶ್ಚಿಮ ಗಳಲ್ಲಿ ಉದ್ದಕ್ಕೂ ಹಬ್ಬಿರುವ ಬೆಟ್ಟದ ಎರಡು ಸಾಲುಗಳು

ಘನ

(ಗ) ಆರು ಸರ್ವಸಮ ಚೌಕ ಫಲಕಗಳಿಂದಾಗಿದ್ದು ಆಸನ್ನ ಫಲಕಗಳ ನಡುವೆ ೯೦0 ಇರುವ ಘನವಸ್ತು. ಯಾವುದೇ ಭುಜದ ಮೂರನೆಯ ಘಾತ ಇದರ ಘನ ಗಾತ್ರ. ಯಾವುದೇ ಸಂಖ್ಯೆಯನ್ನು ಅದರಿಂದಲೇ ಮೂರು ಸಲ ಗುಣಿಸಿದಾಗ ದೊರೆಯುವ ಲಬ್ಧ. x x x x x = x3

ಘನ

(ರ) ದ್ರವ್ಯದ ಒಂದು ಸ್ಥಿತಿ. ಅದರ ಘಟಕಗಳಾದ ಅಣುಗಳ ಅಥವಾ ಅಯಾನ್‌ಗಳ ಸ್ಥಾನಾಂತರಣ ಇಲ್ಲ. ಆದರೆ ಅವು ಸ್ವಸ್ಥಾನದಲ್ಲಿ ಮಾತ್ರ ಕಂಪಿಸಬಲ್ಲವು. ಘನಪದಾರ್ಥಕ್ಕೆ ನಿರ್ದಿಷ್ಟ ಆಕಾರವಿದೆ. ಇದು ವಿರೂಪಣ ಬಲಕ್ಕೆ ರೋಧ ಒಡ್ಡುತ್ತದೆ. ಕೆಲವು ಘನಗಳು ಸ್ಫಟಿಕೀಯವಾಗಿರುವುದಿಲ್ಲ. ಇವು ಅಸ್ಫಟಿಕ ಘನಗಳು. ಸ್ಪಟಿಕೀಯ ಘನ ನಿರ್ದಿಷ್ಟ ಉಷ್ಣತೆಯಲ್ಲಿ ದ್ರವಿಸುತ್ತದೆ. ಇದು ಅದರ ದ್ರವಬಿಂದು. ಅಸ್ಫಟಿಕ ಘನಗಳಿಗೆ ನಿರ್ದಿಷ್ಟ ದ್ರವಬಿಂದುಗಳಿಲ್ಲ. ಕಾಸಿದಾಗ ಅವು ಹೆಚ್ಚು ಹೆಚ್ಚು ನಮ್ಯವಾಗಿ ಕೊನೆಗೆ ದ್ರವಸದೃಶ ಗುಣ ಪಡೆಯುತ್ತವೆ. ಆದ್ದರಿಂದ ಅವನ್ನು ಅಧಿಶೀತಲಿತ ದ್ರವಗಳೆಂದೇ ಭಾವಿಸಬಹುದು

ಘನ ಗಾತ್ರ

(ಸಾ) ಘನ ಪರಿಮಾಣ. ಘನರಾಶಿ

ಘನ ದ್ರಾವಣ

(ಭೌ) ಒಂದು ದ್ರವ್ಯವು ತನ್ನ ಕಣಕಣದಲ್ಲಿಯೂ ಇನ್ನೊಂದು ದ್ರವ್ಯವನ್ನು ಏಕಪ್ರಮಾಣದಲ್ಲಿ ಮೈಗೂಡಿಸಿಕೊಂಡಿರುವುದರಿಂದ ಉಂಟಾದ ಘನ ಮಿಶ್ರಣ. ಉದಾ: ಚಿನ್ನ ಹಾಗೂ ತಾಮ್ರ ಅಂತಹ ಘನ ದ್ರಾವಣ ರೂಪಿಸುತ್ತವೆ. ತಾಮ್ರದ ಕೆಲವು ಪರಮಾಣುಗಳ ಸ್ಥಳದಲ್ಲಿ ಚಿನ್ನದ ಪರಮಾಣುಗಳು ಬಂದಿರುತ್ತವೆ

ಘನ ಹಿಮ

(ರ) ಅತಿಶೈತ್ಯದ ನೀರಿನ ಹನಿಗಳು ಹಠಾತ್ತಾಗಿ ಘನೀಭವಿಸಿದಾಗ ಉಂಟಾಗುವ ಬಿಳಿ ಬಣ್ಣದ ಅಪಾರಕ ಹಿಮ ಕಣಗಳ ದಟ್ಟಣೆ. ಮೋಡ ಅಥವಾ ಮಂಜಿನಿಂದಾದುದು

ಘನಕೋನ

(ಗ) ಸಮತಲೀಯವಲ್ಲದ ಮೂರು ಅಥವಾ ಹೆಚ್ಚು ಸರಳರೇಖೆಗಳು ಅಥವಾ ಏಕತಲೀಯವಲ್ಲದ ಮೂರು ಅಥವಾ ಹೆಚ್ಚು ಸಮತಲಗಳು ಒಂದು ಬಿಂದುವಿನಲ್ಲಿ ಅಥವಾ ಶೃಂಗದಲ್ಲಿ ಸಂಧಿಸಿದಾಗ ಏರ್ಪಡುವ ಕೋನ. ಪ್ರತೀಕW. ನೋಡಿ : ತ್ರಿಫಲಕೀಯ ಕೋನ

ಘನರಸಾಯನ ವಿಜ್ಞಾನ

(ರ) ಸಂಯುಕ್ತದ ಅಣುಗಳಲ್ಲಿ ಪರಮಾಣುಗಳ ದೇಶೀಯ (spatial) ವಿನ್ಯಾಸದ ಮತ್ತು ಅಂಥ ವಿನ್ಯಾಸದ ರಾಸಾಯನಿಕ ಹಾಗೂ ಭೌತ ವೈಜ್ಞಾನಿಕ ಪರಿಣಾಮಗಳ ಅಧ್ಯಯನ. ತ್ರಿ- ಆಯಾಮ ರಸಾಯನ ವಿಜ್ಞಾನ

ಘನರೂಪದರ್ಶನ

(ತಂ) ಎರಡು ಆಯಾಮಗಳ ಚಿತ್ರ ಮೂರು ಆಯಾಮಗಳ (ಘನ) ಚಿತ್ರವಾಗಿ ತೋರುವಂತೆ ಮಾಡುವ ದೃಕ್‌ಸಾಧನ

ಘನವಿಸು

(ಗ) ರಾಶಿಯನ್ನು ಅದರ ಮೂರನೆಯ ಘಾತಕ್ಕೆ ಏರಿಸುವುದು. ಅಂದರೆ, ಅದೇ ರಾಶಿಯನ್ನು ಮೂರು ಸಲ ಗುಣಿಸುವುದು: x x x x x

ಘನಶುಷ್ಕೀಕರಣ

(ರ) ನಿರ್ವಾತದಲ್ಲಿ ಶೀಘ್ರವಾಗಿ ಶೀತಲೀಕರಿಸುವ ಮೂಲಕ ಆಹಾರ ಮತ್ತು ಜೈವಿಕೋತ್ಪನ್ನಗಳನ್ನು ಸಂರಕ್ಷಿಸುವ ಹಾಗೂ ಒಣಗಿಸುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಪದಾರ್ಥಗಳ ಕೋಶಗಳಿಗೆ ಹಾನಿಉಂಟುಮಾಡಬಲ್ಲ ನೀರ್ಗಲ್ಲ ಹರಳುಗಳು ರೂಪುಗೊಳ್ಳಲು ಆಗುವುದಿಲ್ಲ. ಆಹಾರ ಮತ್ತು ಕೋಶೀಯ ಪದಾರ್ಥಗಳನ್ನು, ರಕ್ತವನ್ನೂ ಒಳಗೊಂಡಂತೆ, ಈ ವಿಧಾನದಿಂದ ಸಂರಕ್ಷಿಸಿ ಇರಿಸಬಹುದು

ಘನಸ್ಥಿತಿ ಭೌತವಿಜ್ಞಾನ

(ಭೌ) ಅರೆವಾಹಕ
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App