भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಕ್ಕು

(ತಂ) ಕಬ್ಬಿಣ ಮತ್ತು ಶೇ. ೨ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಒಳಗೊಂಡಿರುವ ಮಿಶ್ರಲೋಹ. ಮ್ಯಾಂಗನೀಸ್, ಸಿಲಿಕಾನ್, ತಾಮ್ರ, ರಂಜಕ ಮತ್ತು ಗಂಧಕಗಳೂ ವಿವಿಧ ಪ್ರಮಾಣಗಳಲ್ಲಿ ಇರಬಹುದು. ಉಕ್ಕಿನ ಬಿಗಿತ, ಗಡಸುತನ ಮತ್ತು ಸಾಮರ್ಥ್ಯ ಅದರಲ್ಲಿರುವ ಕಾರ್ಬನ್ ಅಂಶವನ್ನು ಅವಲಂಬಿಸಿವೆ

ಉಕ್ಕೇರು

(ಭೌ) ವಿದ್ಯುತ್ ಪ್ರವಾಹದ ವೋಲ್ಟೇಜ್‌ನಲ್ಲಾದ ಅತಿ ಉನ್ನತ ಆದರೆ ಕ್ಷಣಿಕ ಹೆಚ್ಚಳ

ಉಕ್ತವಾಣಿ

(ತಂ) ಮಾತನ್ನು ದಾಖಲಿಸಿಕೊಂಡು ಅವಶ್ಯವಾದಾಗ ಪುನರುಚ್ಚರಿಸುವ ಸಲಕರಣೆ

ಉಕ್ತಿ

(ಗ) ಗಣಿತ ತರ್ಕಶಾಸ್ತ್ರದಲ್ಲಿ ನಿಜ ಮೌಲ್ಯವನ್ನು ನಿರ್ಧರಿಸಬಹುದಾದ ಸೂತ್ರ. ಉದಾ: ೧+೧=೨; ೫+೪=೦ ಮೊದಲನೆಯದರ ನಿಜ ಮೌಲ್ಯ ೧, ಎರಡನೆಯದರ ನಿಜ ಮೌಲ್ಯ ೦. ನೋಡಿ: ಹೇಳಿಕೆ

ಉಕ್ತಿ

(ಗ) ನೋಡಿ: ಗಣಿತೋಕ್ತಿ

ಉಗಿ ಎಂಜಿನ್

(ತಂ) ಉಗಿಯಲ್ಲಿ ಇರುವ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ. ಇದು ಆವಿಯ ಸ್ಥಿತಿಸ್ಥಾಪಕ ಗುಣವನ್ನೂ ಅದರ ವಿಸ್ತರಣ ಅಥವಾ ಶೀಘ್ರ ದ್ರವೀಭವನ ಗುಣವನ್ನೂ ಉಪಯೋಗಿಸಿಕೊಂಡು ಕೆಲಸ ಮಾಡುತ್ತದೆ. ಇದರ ಪ್ರಮುಖ ಬಿಡಿಭಾಗಗಳು: ನಾಳಿ (ಸಿಲಿಂಡರ್) ಮತ್ತು ಇದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಆಡುಬೆಣೆ/ಕೊಂತ (ಪಿಸ್ಟನ್). ಈ ಆಡುಬೆಣೆ ದಂಡವನ್ನು ವೃತ್ತಾಕಾರದ ಗಾಲಿಯ ಮಗ್ಗುಲಿಗೆ ಜೋಡಿಸಿದೆ. ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಈಗ ಇದರ ಬದಲು ಉಗಿತಿರುಬಾನಿ ಹಾಗೂ ಅಂತರ್ದಹನ ಎಂಜಿನ್‌ಗಳು ಹೆಚ್ಚಾಗಿ ಬಳಕೆಗೆ ಬಂದಿವೆ

ಉಗಿ ಬಟ್ಟೀಕರಣ

(ರ) ನೀರಿನಲ್ಲಿ ವಿಲೇಯ ವಾಗದಂಥ ದ್ರವಗಳ ಮೂಲಕ ಉಗಿಯನ್ನು ಹಾಯಿಸಿ ಬಟ್ಟೀಕರಿಸುವ ಒಂದು ವಿಧಾನ. ಪರಸ್ಪರ ವಿಲೇಯವಾಗದಂಥ ಎರಡು ದ್ರವಗಳ ಮಿಶ್ರಣದ ಆವಿ ಒತ್ತಡ ಶುದ್ಧ ರೂಪ ದ್ರವದ ಆವಿ ಒತ್ತಡಕ್ಕಿಂತ ಕಡಿಮೆಯಾಗಿರುತ್ತದೆ ಎಂಬ ಅಂಶವನ್ನು ಇದು ಆಧರಿಸಿದೆ

ಉಂಗುರ

(ರ) ನೋಡಿ : ವಲಯ

ಉಂಗುರ ನೀಹಾರಿಕೆ

(ಖ) ವೀಣಾಪುಂಜದಲ್ಲಿರುವ ಗ್ರಹಯುಕ್ತ ನೀಹಾರಿಕೆ (M೫೭ ಅಥವಾ NGC ೬೭೨೦). ನಮ್ಮ ದೃಷ್ಟಿರೇಖೆಗೆ ಲಂಬ ತಳದಲ್ಲಿ ವಿಕ್ಷೇಪಗೊಳ್ಳುವ ಈ ನೀಹಾರಿಕೆಯ ಆಕಾರ ಉಂಗುರದಂತೆಯೇ ಕಾಣುತ್ತದೆ. ಇದರಲ್ಲಿ ಅಲ್ಲಲ್ಲಿ ಹರಡಿರುವ ಅನಿಲದ ತುಣುಕುಗಳು ಸೂರ್ಯನ ಸುತ್ತಲಿನ ಗ್ರಹಗಳ ಚಿತ್ರವನ್ನು ನೆನಪಿಗೆ ತರುವುದರಿಂದ ಇದಕ್ಕೆ ಗ್ರಹಯುಕ್ತ ನೀಹಾರಿಕೆ ಎಂಬ ಹೆಸರು

ಉಗುರು

(ಪ್ರಾ) ಮೇಲ್ವರ್ಗದ ಸ್ತನಿಗಳಲ್ಲಿ ಬೆರಳುಗಳ ತುದಿ ಗಳಲ್ಲಿ ಪಂಜಗಳ ಸ್ಥಾನದಲ್ಲಿ ಬೆಳೆದ ಅಧಿಚರ್ಮ ಮೂಲದ ಕೊಂಬಿನಂಥ ಫಲಕ. ನಖ

ಉಂಗುಷ್ಟ

(ವೈ) ಕಾಲಿನ ಹೆಬ್ಬೆರಳು (ತಂ) ಉಗಿಎಂಜಿನ್‌ನ ಕವಾಟ ಎತ್ತಿಗೆಯ ದಂಡದ ತೋಳು. ಊರೆಗೋಡೆ ಇತ್ಯಾದಿಗಳ ಬುಡದಲ್ಲಿ ಭದ್ರತೆಗಾಗಿ ಹಾಕಿರುವ ಮುಂಚಾಚು

ಉಗುಳು

(ವೈ) ಮೂಗು, ಗಂಟಲು, ಶ್ವಾಸನಾಳ ಅಥವಾ ಶ್ವಾಸಕೋಶಗಳ ಸ್ರಾವಗಳಿಂದ ಕೂಡಿದ ಮತ್ತು ಉಗಿಯುವ ಪದಾರ್ಥ. ಜೊಲ್ಲು, ಲೋಳೆ, ಕೀವು, ಸೂಕ್ಷ್ಮ ಜೀವಿಗಳು, ರಕ್ತ ಇತ್ಯಾದಿಗಳಿಂದಲೂ ಕೂಡಿರಬಹುದು

ಉಗ್ಗು

(ವೈ) ಇದು ಭಾಷೆಗೆ ಮತ್ತು ಮನಸ್ಸಿಗೆ ಸಂಬಂಧಿಸಿದ ಒಂದು ತೊಂದರೆ. ೧. ಮಾತನಾಡುವಾಗ ಹಿಂಜರಿಕೆ, ತಪ್ಪು ಉಚ್ಚಾರ, ಪುನರಾವರ್ತನೆ, ತಡವರಿಸುವುದು ಕಂಡುಬರಬಹುದು. ಕಾರಣ ಮಾನಸಿಕ ಉದ್ವೇಗ, ಮುಜುಗರ ಅಥವಾ ವಿಷಯದ ಬಗ್ಗೆ ಅಪರಿಚಿತತೆ. ೨. ಕೆಲವು ಅಕ್ಷರಗಳನ್ನು (ಮುಖ್ಯವಾಗಿ ಲ, ರ, ಸ) ತಪ್ಪಾಗಿ ಅಥವಾ ಒಂದರ ಬದಲು ಮತ್ತೊಂದನ್ನು ಉಪಯೋಗಿ ಸುವುದು. ‘ಸ್ಟಟ್ಟರಿಂಗ್’ ಎಂಬ ಮತ್ತೊಂದು ಅವಸ್ಥೆಯಿದೆ. ಇದು ಸ್ಟಾಮರಿಂಗ್‌ಗಿಂತ ಭಿನ್ನವಾದದ್ದು. ಇಲ್ಲಿಯೂ ಸಹ ವ್ಯಕ್ತಿ ಉಗ್ಗುತ್ತಾನೆ. ಆದರೆ ಉಗ್ಗಿಗೆ ಭಾಷಾ ತೊಂದರೆಯಿರುವುದಿಲ್ಲ. ಧ್ವನ್ಯಂಗಗಳ ಹೊಂದಾಣಿಕೆಯಲ್ಲಿ ತೊಂದರೆಯಿರುತ್ತದೆ. ಆತಂಕದಿಂದ ಸಮಸ್ಯೆ ಬಿಗಡಾಯಿಸಬಹುದು. ಬಿಕ್ಕಲು. ಗುಕ್ಕು. ನತ್ತು.

ಉಚ್ಚ

(ಖ) ಅತಿದೂರದ. (ಜೀ) ಮೇಲಿನ/ಮೇಲುಗಡೆ ಬೆಳೆಯುವ. ಉದಾ: ಹೂಬಿಡುವ ಸಸ್ಯಗಳಲ್ಲಿ ಪುಷ್ಪಪಾತ್ರದ ಮೇಲೆ/ಮೇಲುಗಡೆ ಬೆಳೆಯುವ ಅಂಡಾಶಯ

ಉಚ್ಚ ಪರಿಬಂಧ

(ಗ) ನೋಡಿ: ಪರಿಬಂಧಿತ

ಉಚ್ಚ ಜವ ಉಕ್ಕು

(ತಂ) ಲೋಹಗಳನ್ನು ಕತ್ತರಿಸುವ ಯಂತ್ರಮುಟ್ಟುಗಳಲ್ಲಿ ಬಳಸುವ ಗಡಸು ಉಕ್ಕು. ತಗ್ಗಿನ ಕೆಂಗಾವಿನಲ್ಲೂ ಗಡಸುತನವನ್ನು ಉಳಿಸಿಕೊಂಡೇ ಇರುವುದರಿಂದ ಇದನ್ನು ಉನ್ನತ ವೇಗದಲ್ಲಿ ಚಲಿಸುವ ಲೇತ್ ಇತ್ಯಾದಿಗಳಲ್ಲಿ ಬಳಸಲಾಗುವುದು. ಇದರಲ್ಲಿ ಸಾಮಾನ್ಯವಾಗಿ ೧೨-೧೮% ಟಂಗ್‌ಸ್ಟನ್, ೫% ಕ್ರೋಮಿಯಮ್, ೦.೪-೦.೭% ಕಾರ್ಬನ್ ಮತ್ತು ಅಲ್ಪ ಪ್ರಮಾಣ ಗಳಲ್ಲಿ ವೆನೇಡಿಯಮ್, ಮಾಲಿಬ್ಡಿನಮ್ ಇತ್ಯಾದಿಗಳಿರುತ್ತವೆ

ಉಚ್ಚ ಪರಿಮಿತಿ

(ಗ) ಚರದ ವ್ಯಾಪ್ತಿಯನ್ನು ನಿರ್ಧರಿಸುವ ಎರಡು ಕೋನಗಳಿಗೆ ಅದರ ಪರಿಮಿತಿಗಳೆಂದು ಹೆಸರು. ಉದಾಹರಣೆಗೆ 0 < x < 100 ಎಂದಿರುವಾಗ x ಚರದ ಪರಿಮಿತಿಗಳು ೦ ಮತ್ತು ೧೦೦. ಈ ಪೈಕಿ ಕೆಳಗಿನದು (೦) ನೀಚ, ಮೇಲಿನದು (೧೦೦) ಉಚ್ಚ ಪರಿಮಿತಿ. ನೋಡಿ: ಪರಿಮಿತಿ

ಉಚ್ಚ ಮಹಾಸಿರೆ

(ವೈ) ದೇಹದ ಮೇಲ್ಭಾಗದಿಂದ ಆಕ್ಸಿಜನ್ ಕೊರತೆಯಿರುವ ರಕ್ತವನ್ನು ಹೃದಯದೆಡೆಗೆ ಸಾಗಿಸುವ ಪ್ರಮುಖ ರಕ್ತನಾಳ

ಉಚ್ಚ ವೋಲ್ಟೇಜ್

(ಭೌ) ಸಾಮಾನ್ಯವಾಗಿ ೬೫೦ ಅಥವಾ ಹೆಚ್ಚು (ಸಾವಿರಾರು) ವೋಲ್ಟ್‌ಗಳ (ವಿದ್ಯುದ್ಬಲ)

ಉಚ್ಚ ಶಕ್ತಿ ಭೌತವಿಜ್ಞಾನ

(ಭೌ) ನೋಡಿ: ಕಣಭೌತವಿಜ್ಞಾನ

Search Dictionaries

Loading Results

Follow Us :   
  Download Bharatavani App
  Bharatavani Windows App