भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234Next >

ಇಂಕಸ್

(ಪ್ರಾ) ಮನುಷ್ಯ ದೇಹದಲ್ಲಿಯೇ ಅತ್ಯಂತ ಚಿಕ್ಕದಾಗಿರುವ, ನಡುಕಿವಿಯಲ್ಲಿರುವ ಮೂರು ಮೂಳೆಗಳ ಪೈಕಿ ನಡುವಿನ ಮೂಳೆ. ಶಬ್ದ ರವಾನೆಯಲ್ಲಿ ಪಾಲ್ಗೊಳ್ಳುತ್ತದೆ. ನೋಡಿ: ಸ್ಥೂಣಾಸ್ಥಿ

ಇಕಾನೊಮೀಟರ್

(ರ) ಅನಿಲಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಅಳೆಯಲು ಬಳಸುವ ಉಪಕರಣ

ಇಕ್‌ಥಿಯೋಸಿಸ್

(ವೈ) ಮನುಷ್ಯನ ಹೊರಚರ್ಮ ಹರುಕಲಾಗಿ ಮೀನಿನ ಹೊರಮೈಯಂತೆ ಚೆಕ್ಕೆ ಚೆಕ್ಕೆಯಂತೆ ಆಗುವ, ಹುಟ್ಟಿನಿಂದ ಬಂದ ಚರ್ಮ ರೋಗ. ಮೀನು ದೊಗಲು ರೋಗ

ಇಕ್ನೂಮಾನ್

(ಪ್ರಾ) ಮೊಸಳೆ ಮೊಟ್ಟೆಗಳನ್ನು ಹಾಳುಗೆಡಹುವ, ಮುಂಗುಸಿ ಬಳಗದ, ಉತ್ತರ ಆಫ್ರಿಕ ಮೊದಲಾದ ಕಡೆಗಳಲ್ಲಿ ಕಂಡು ಬರುವ ಕಂದು ಬಣ್ಣದ ಚತುಷ್ಪಾದಿ

ಇಕ್ನೂಮಾನ್ ನೊಣ

(ಪ್ರಾ) ಹೈಮಿನಾಪ್ಟರ ಉಪವರ್ಗ, ಇಕ್ನೂಮಾನಿಡೀ ಕುಟುಂಬಕ್ಕೆ ಸೇರಿದ ಪರೋಪಜೀವಿ ಕೀಟ. ಲೆಪಿಡಾಪ್ಟರ ಅಥವಾ ಇತರ ಉಪವರ್ಗದ ಕೀಟಗಳ ಲಾರ್ವದ ಮೇಲೋ ಇಲ್ಲವೆ ಒಳಗೋ ಮೊಟ್ಟೆ ಇಡುತ್ತದೆ. ಸದಾ ಅದುರುತ್ತಿರುವ ಕುಡಿ ಮೀಸೆಗಳು ಇದರ ವೈಶಿಷ್ಟ್ಯ. ಕಂಬಳಿಹುಳುಗಳನ್ನು ನಾಶ ಮಾಡುತ್ತದೆ, ಜೇಡಗಳನ್ನು ತಿಂದುಹಾಕುತ್ತದೆ

ಇಂಗಾಲ

(ರ) ನೋಡಿ : ಕಾರ್ಬನ್

ಇಂಗಾಲ ಕಾಲಗಣನೆ

(ಭೌ) ನೋಡಿ: ಕಾರ್ಬನ್ ಕಾಲಗಣನೆ

ಇಂಗಾಲ ಪ್ರತಿ

(ಸಾ) ಮೂಲದ ಯಥಾ ನಕಲು

ಇಂಗು

(ಸ) ಏಪಿಯೇಸೀ (ಗಜ್ಜರಿ) ಕುಟುಂಬಕ್ಕೆ ಸೇರಿದ ಕೊತ್ತಂಬರಿ, ಬ್ರಾಹ್ಮಿ (ಒಂದೆಲಗ ಅಥವಾ ತಿಮರೆ) ಸಸ್ಯಗಳ ಹತ್ತಿರ ಸಂಬಂಧಿಯಾದ ಫೆರುಲ ಅಸಫಿಟಿಡ ಎಂಬ ಸಸ್ಯದ ಬೇರನ್ನು ಗಾಯಗೊಳಿಸಿದಾಗ ದೊರೆಯುವ ವಿಶಿಷ್ಟ ವಾಸನೆಯ ಗೋಂದುರಾಳ. ಇದರಲ್ಲಿ ಫೆರುಲಿಕ್ ಆಮ್ಲ ಮತ್ತು ಆವಿಶೀಲ ಸುಗಂಧ ತೈಲಗಳಿವೆ. ಔಷಧಿಯಲ್ಲಿ ಬಳಕೆ. ಅಡುಗೆಯಲ್ಲಿ ಉಪಯುಕ್ತ ಪರಿಕರ. ಹಿಂಗು, ರಾಮಡ, ಬಾಹ್ಲೀಕ

ಇಗ್ವಾನೊಡನ್

(ಪ್ರಾ) ಈಗ ಫಾಸಿಲ್‌ಆಗಿ ಕಾಣಸಿಗುವ ಬೃಹದಾಕಾರದ ಹಲ್ಲಿ ಜಾತಿಯ ಸಸ್ಯಾಹಾರಿ ಪ್ರಾಣಿ. ಉಡ

ಇಚ್ಚಿತ್ತ ವಿಕಲತೆ

(ವೈ) ಕೆಲವು ವಿಧದ ಮಾನಸಿಕ ರೋಗಗಳಿಗೆ ನೀಡಿರುವ ಸಮೂಹ ಹೆಸರು. ಇದು ವ್ಯಕ್ತಿಯ ಆಲೋಚನಾ ವಿಧಾನದಲ್ಲಿನ ವೈಪರೀತ್ಯಕ್ಕೆ ಸಂಬಂಧಿಸಿದ್ದು. ವ್ಯಕ್ತಿತ್ವವೇ ಎರಡಾಗಿ ತೋರುವ ಮನೋರೋಗ. ದೃಶ್ಯ ಭ್ರಮೆ ಹಾಗೂ ಶ್ರವ್ಯ ಭ್ರಮೆ ಸಾಮಾನ್ಯ. ಇಂಥ ವ್ಯಕ್ತಿ ವಾಸ್ತವ ಜಗತ್ತಿನಿಂದ ವಿಮುಖನಾಗಿ, ತನ್ನದೇ ಆದ ಜಗತ್ತಿನಲ್ಲಿ ಹುದುಗಿಕೊಂಡಿದ್ದು ಪರಿಸರದ ಆಗು ಹೋಗುಗಳಿಗೆ ಸ್ಪಂದಿಸುವ ಸಾಮರ್ಥ್ಯ ಕಳೆದುಕೊಂಡಿರುತ್ತಾನೆ. ಹಲವು ನಮೂನೆಗಳಿವೆ. ಷಿ(ಸ್ಕಿ)ಜೋಫ್ರೇನಿಯಾ. ಛಿದ್ರಮನಸ್ಕತೆ

ಇಚ್ಚಿಪ್ಪು ಮೀನು

(ಪ್ರಾ) ಪೆಕ್ಟಿನ್ ಜಾತಿ, ಲ್ಯಾಮಿಲಿ ಬ್ರಾಂಕಿಯ ವರ್ಗ, ಫಿಲಿಬ್ರಾಂಕಿಯ ಉಪವರ್ಗಕ್ಕೆ ಸೇರಿದ ಕಡಲ ಮೃದ್ವಂಗಿ. ಇದರಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಪ್ರಭೇದಗಳಿವೆ. ಕಿವಿರುಗಳಿಗೆ ದ್ವಂದ್ವ ತಂತುಗಳಿದ್ದು ಅವುಗಳ ಮೇಲೆ ಕಪ್ಪೆಚಿಪ್ಪಿನಂತೆ ಹೊಳೆಯುವ ಪದರ ಗಳಿರುವುದು ಈ ಗುಂಪಿನ ಪ್ರಾಣಿಗಳ ಪ್ರಮುಖ ಲಕ್ಷಣ. ಇವುಗಳಲ್ಲಿ ಕೆಲವನ್ನು ಮಾನವನು ಆಹಾರವಾಗಿ ಬಳಸುತ್ತಾನೆ. ಮಧ್ಯಯುಗದ ಯಾತ್ರಿಕರು ಇವುಗಳ ಕವಡೆಗಳನ್ನು ಸಂಕೇತ ಮುದ್ರೆಗಳಾಗಿ ಧರಿಸುತ್ತಿದ್ದರು

ಇಚ್ಛೆ

(ವೈ) ಸಂಕಲ್ಪ . ಇಷ್ಟ , ಉದ್ದೇಶ

ಇಂಜೆಕ್ಟರ್

(ವೈ) ೧. ಸೂಜಿ ಮದ್ದು ನೀಡುವವನು, ನೀಡುವುದು, ಚುಚ್ಚುಗ. ಅಂತಃಕ್ಷೀಪಕ. ೨. ಔಷಧ ಇತ್ಯಾದಿಗಳನ್ನು ದೇಹದ ಒಳಗೆ ಹೊಗಿಸಲು ನೆರವಾಗುವ ಸಾಧನ. (ತಂ) ೧. ಅಂತರ್ದಹನ ಎಂಜಿನ್ನಿನ ಸಿಲಿಂಡರಿಗೆ ಇಂಧನವನ್ನು ಸಿಂಪಡಿಸುವ ಸಾಧನ. ೨. ಮೊದಲು ಉಗಿ-ಬಾಯಿಲರ್ ಒಳಕ್ಕೆ ಉಗಿ ಪ್ರವಾಹವನ್ನು ಬಲವಾಗಿ ಹೊಗಿಸಿ ದಾರಿ ಮಾಡಿ ಅನಂತರ ನೀರನ್ನು ನುಗ್ಗಿಸುವ ಸಾಧನ

ಇಂಜೆಕ್ಷನ್

(ವೈ) ೧. ಸೂಜಿಯನ್ನೊಳಗೊಂಡ ಪಿಚಕಾರಿ ಯಂತಹ ಸಾಧನದಿಂದ ಔಷಧ ಇತ್ಯಾದಿಗಳನ್ನು ತಳಚರ್ಮದ ಊತಕದೊಳಗೆ (ತಳಚರ್ಮದ ಸೂಜಿಮದ್ದು), ಸ್ನಾಯುವಿನ ಒಳಗೆ (ಅಂತಃಸ್ನಾಯು ಸೂಜಿಮದ್ದು), ಸಿರೆಯೊಳಗೆ (ಅಂತಸ್ಸಿರ ಸೂಜಿ ಮದ್ದು) ಚುಚ್ಚುವುದು. ೨. ಸೂಜಿ ಇಲ್ಲದೆ ನೇರವಾಗಿ ನೆಟ್ಟಗರುಳಿ ನೊಳಗೆ (ಎನಿಮ, ವಸ್ತಿ), ಯೋನಿಯೊಳಗೆ (ಪ್ರಕ್ಷಾಲನ), ಮೂತ್ರನಾಳ ಅಥವಾ ದೇಹದ ಇತರ ನಾಳಗಳೊಳಗೆ ಔಷಧಯುಕ್ತ ದ್ರಾವಣವನ್ನು ಚಿಮ್ಮಿ ಅವುಗಳನ್ನು ತೊಳೆಯುವುದು. ೩. ಸೂಜಿಯ ಮೂಲಕ ಚುಚ್ಚಬಹುದಾದ ಮದ್ದು. (ಭೂವಿ) ಶಿಲೆಗಳಲ್ಲಿ ಕಂಡುಬರುವ ಬಿರುಕು ಒಡಕು, ಸಂಧಿಗಳಲ್ಲಿ ದ್ರಾವಕಗಳನ್ನು ತುಂಬಿಸಿ ಗಟ್ಟಿ ಮಾಡುವುದು. (ತಂ) ಅಂತರ್ದಹನ ಎಂಜಿನ್ನಿನ ಸಿಲಿಂಡರಿಗೆ ಇಂಧನವನ್ನು ಸಿಂಪಡಿಸುವ ಪ್ರಕ್ರಿಯೆ. (ಅಂವಿ) ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಂತೆ ರಾಕೆಟ್ಟಿನ ಕೊನೆಯ ಘಟ್ಟವನ್ನು ಹೊತ್ತಿಸುವುದು

ಇಂಟರ್ನ್

(ಸಾ) ಯಾವುದೇ ಒಂದು ದೇಶ, ಪ್ರದೇಶ ಮೊದಲಾದವುಗಳ ಗಡಿಗಳೊಳಗೇ ಇರಬೇಕೆಂದು ನಿರ್ಬಂಧಿಸು. ಸ್ಥಾನಬದ್ಧಗೊಳಿಸು (ವೈ) ಆಸ್ಪತ್ರೆಯಲ್ಲಿ ಹಂಗಾಮಿ ಸಹಾಯಕ ವೈದ್ಯನಾಗಿ ಇಲ್ಲವೇ ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡುವ ಹಿರಿಯ ವಿದ್ಯಾರ್ಥಿ ಅಥವಾ ನೂತನ ಪದವೀಧರ

ಇಂಟರ್‌ನ್ಯಾಷನಲ್ ಕ್ಯಾಂಡಲ್

(ಭೌ) ದೀಪ್ತ ತೀವ್ರತೆಯನ್ನು ಅಳೆಯಲು ಹಿಂದೆ ಬಳಸುತ್ತಿದ್ದ ಏಕಮಾನ. ಈಗ ಇದರ ಸ್ಥಾನದಲ್ಲಿ ಕ್ಯಾಂಡೆಲ ಬಂದಿದೆ. ಮೌಲ್ಯದಲ್ಲಿ ಅದಕ್ಕಿದು ಸಮ

ಇಂಟರ್‌ಫೆರಾನ್

(ವೈ) ಇದೊಂದು ಸಣ್ಣ ಗಾತ್ರದ ಪ್ರೋಟೀನು. ನಮ್ಮ ದೇಹದೊಳಗೆ ಜೀವಂತ ಅಥವಾ ನಿರ್ಜೀವ ವೈರಸ್ ಪ್ರವೇಶಿಸಿದಾಗ ಅದನ್ನು ನಿಗ್ರಹಿಸಲು ನಮ್ಮ ದೇಹ ಉತ್ಪಾದಿಸುವ ಒಂದು ವಿಶೇಷ ಪ್ರೋಟೀನು. ಇದು ವೈರಸ್ಸನ್ನು ದುರ್ಬಲಗೊಳಿಸುತ್ತದೆ. ಒಂದು ಬಗೆಯ ವೈರಸ್ಸಿಗಾಗಿ ಸಿದ್ಧಗೊಂಡ ಇಂಟರ್‌ಫೆರಾನ್, ಆ ವೈರಸ್ಸಿನ ಸೋದರ ಸಂಬಂಧಿ ವೈರಸ್ಸು ಗಳನ್ನೂ ನಾಶಮಾಡಬಲ್ಲದು. ನಿರೋಧಕ ಪ್ರೋಟೀನು, ಪ್ರತಿಬಂಧಕ ಪ್ರೋಟೀನ್

ಇಂಟರ್‌ಫೇಸ್

(ರ) ಯಾವುದೇ ಎರಡು ಸ್ಥಿತಿಗಳ ನಡುವಿನ ಸಾಮಾನ್ಯ ಮುಖ. ಅನಿಲ, ದ್ರವ ಹಾಗೂ ಘನಸ್ಥಿತಿಗಳ ನಡುವೆ ಐದು ಬಗೆಯ ಇಂಟರ್‌ಫೇಸ್‌ಗಳಿವೆ: ಅನಿಲ-ದ್ರವ, ಅನಿಲ-ಘನ, ದ್ರವ-ದ್ರವ, ದ್ರವ-ಘನ ಹಾಗೂ ಘನ-ಘನ. ಎರಡು ರಾಸಾಯನಿಕ ಸ್ಥಿತಿಗಳನ್ನು ಪ್ರತ್ಯೇಕಿಸುವ ಮೇಲೈ. ಅಂತರಮುಖ (ಕಂ) ಒಟ್ಟಿಗೆ ಉಪಯೋಗಿಸುವಂತೆ ಕಂಪ್ಯೂಟರ್‌ನ ಯಂತ್ರಾಂಶ ಹಾಗೂ ತಂತ್ರಾಂಶ ಭಾಗಗಳನ್ನು ಕೂಡಿಸುವ ಸಾಧನ (ಜೀ) ಮೈಟಾಸಿಸ್‌ಗಳ ನಡುವಿನ ಕೋಶ ಚಕ್ರದ ಅವಧಿ. ನೋಡಿ: ಮೈಟೋಸಿಸ್

ಇಂಟರ್‌ಸ್ಟೆರೈಲ್

(ಜೀ) ಅಡ್ಡತಳಿ ಉಂಟು ಮಾಡಲಾಗದ (ಎರಡು ಪ್ರಾಣಿಗಳು ಅಥವಾ ಸಸ್ಯಗಳು)
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App