भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567891718Next >

ಆಕರ

(ತಂ) ಫೀಲ್ಡ್ ಎಫೆಕ್ಟ್ ಟ್ರಾನ್ಸಿಸ್ಟರ್‌ನಲ್ಲಿರುವ ಎಲೆಕ್ಟ್ರೋಡ್. ಇದರಿಂದ ಎಲೆಕ್ಟ್ರಾನ್‌ಗಳು ಹೊಮ್ಮಿ ಎಲೆಕ್ಟ್ರೋಡ್‌ಗಳ ನಡುವಿನ ಪ್ರದೇಶವನ್ನು ಪ್ರವೇಶಿಸುತ್ತವೆ. (ಭೌ) ವಿಕಿರಣಪಟುತ್ವದಲ್ಲಿ ಆಲ್ಫ, ಬೀಟ ಅಥವಾ ಗ್ಯಾಮಾ ಕಿರಣಗಳ ಉಗಮ ಸ್ಥಾನ

ಆಕರಕೋಶ

(ಜೀ) ಹಲವು ಬಗೆಯ ಕೋಶಗಳನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಪ್ರತ್ಯೇಕಿತ ಕೋಶ. ಭ್ರೂಣದ ಬೆಳವಣಿಗೆಯ ಆರಂಭದಲ್ಲಿ ಇಂತಹ ಕೋಶಗಳನ್ನು ಬೇರ್ಪಡಿಸಿ ಅಂಗಾಂಗಗಳ ಊತಕ ಕೃಷಿಗೆ ಬಳಸಬಹುದು. ಕಾಂಡಕೋಶ

ಆಂಕರೈಟ್

(ಭೂವಿ) ಕ್ಯಾಲ್ಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದ ಕಾರ್ಬೊನೇಟ್. ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿರುವ ಬಿಳಿ, ಕೆಂಪು/ಬೂದು ಕಾರ್ಬೊನೇಟ್ ಖನಿಜ. ಸಾಸಾಂ ೨.೯೫-೩.೧ Ca (Fe, Mg, Mn) (CO3)2

ಆಕರೈನ

(ಪ್ರಾ) ಆರ್ತ್ರಾಪೊಡ ವಿಭಾಗ. ಆರ‍್ಯಾಕ್ನಿಡ ವರ್ಗದ ಒಂದು ಗಣ: ಗೋಳಾಕಾರದ ಅವಿಭಾಜಿತ ದೇಹವಿದೆ. ಉದಾ: ನುಸಿ, ಉಣ್ಣಿ

ಆಕರ್ಷಣೆ

(ಭೌ) ಒಂದು ವಸ್ತು ಇನ್ನೊಂದರತ್ತ ಸೆಳೆಯಲ್ಪಡುವುದು

ಆಕಸ್ಮಿಕ ಪ್ರಭೇದ

(ಪ್ರಾ) ಜೀವಿ ಸಮುದಾಯ ವೊಂದರಲ್ಲಿ ಕಂಡುಬರುವ ಅಪರೂಪದ ಜಾತಿ. ಬೇರೆ ಪ್ರದೇಶ ಗಳಿಂದ ಬಂದಿರಬಹುದು. ಸಮುದಾಯದ ಜಾತಿಗಳ ಗುಣಗಳನ್ನು ವಿಶ್ಲೇಷಿಸುವಾಗ ಆಕಸ್ಮಿಕ ಪ್ರಭೇದಗಳನ್ನು ಪರಿಗಣಿಸುವುದಿಲ್ಲ

ಆಕಳ ಸಿಡುಬು

(ವೈ) ವ್ಯಾಕ್ಸೀನಿಯ ವೈರಸ್ಸಿನ ಕಾರಣ ದನಗಳಲ್ಲಿ ತೋರುವ ಗುಳ್ಳೆ ಸಹಿತದ ಸೋಂಕುಬೇನೆ. ಇದು ಮಾನವ ಸಿಡುಬನ್ನು ಹೋಲುತ್ತದೆ. ಆದರೆ ಅದಕ್ಕಿಂತ ಸೌಮ್ಯ ವಾದದ್ದು. ಆಕಳುಗಳ ಕೆಚ್ಚಲ ಮೇಲೆ ಕೀವುಗುಳ್ಳೆಗಳೇಳುತ್ತವೆ. ಈ ಕೀವನ್ನು (ಲಸಿಕೆಯನ್ನು) ಸಂಗ್ರಹಿಸಿ ಅದನ್ನು ಮಾನವರಿಗೆ ಚುಚ್ಚಿದಾಗ, ಅವರಿಗೆ ಮಾನವ ಸಿಡುಬು ಬರದಂತೆ ರಕ್ಷಣೆ ದೊರೆಯುತ್ತದೆ

ಆಕಾಶ

(ಖ) ಭೂಮಿ ಮೇಲೆ ಕವಿಚಿರುವಂತೆ ಭಾಸವಾಗುವ ಅರ್ಧಗೋಳ ಚಾವಣಿ. ಗಗನ ಕಾಯಗಳೆಲ್ಲವೂ ಇದಕ್ಕೆ ಲಗತ್ತಾಗಿ ಅಲ್ಲಿಯೇ ಚಲಿಸುತ್ತಿರುವಂತೆ ತೋರುತ್ತವೆ. ಪ್ರಧಾನವಾಗಿ, ಸೂರ್ಯನ ಬೆಳಕನ್ನು ವಾಯುಮಂಡಲದ ಅನಿಲಾಣುಗಳು ಮತ್ತು ದೂಳ ಕಣಗಳು ಚದರಿಸುವುದರಿಂದ ಆಕಾಶಕ್ಕೆ ಆಕಾರವೂ ಬಣ್ಣವೂ ಒದಗಿದೆ. ಬಾನು, ಗಗನ

ಆಕಾಶ ಸಂಶೋಧನೆ

(ಅಂವಿ) ಭೂವಾತಾವರಣದ ಆಚೆಗಿರುವ ಆಕಾಶ ಪರಿಸರ, ವಸ್ತುಗಳ ಮೇಲೆ ಅದರ ಪರಿಣಾಮ, ಭೂವೀಕ್ಷಣೆಗೂ ಅಂತರಿಕ್ಷ ಆಳಗಳ ವೀಕ್ಷಣೆಗೂ ಅನುಕೂಲ ಬಿಂದುವಾಗಿ ಅದರ ಬಳಕೆ – ಇವುಗಳ ಪರಿಶೋಧನೆ. ಸಾಮಾನ್ಯವಾಗಿ ಅಂತರಿಕ್ಷ ನೌಕೆಯೊಂದರ ನೆರವಿನಿಂದ ನಡೆಸಲಾಗುತ್ತದೆ. ವ್ಯೋಮ ಸಂಶೋಧನೆ

ಆಕಾಶಗಂಗಾತೀತ

(ಖ) ಆಕಾಶಗಂಗೆಯ ಹೊರಗೆ ಇರುವ ಅಥವಾ ಹೊರಗಿನಿಂದ ಬರುವ. ಬ್ರಹ್ಮಾಂಡಾತೀತ

ಆಕಾಶತರಂಗ

(ತಂ) ಪ್ರೇಷಕದಿಂದ ಬಿತ್ತರಿಸಲ್ಪಟ್ಟು, ಅಯಾನ್‌ಗೋಳದಿಂದ ಪ್ರತಿಫಲನಗೊಂಡು ಗ್ರಾಹಕವನ್ನು ತಲಪುವ ರೇಡಿಯೋ ತರಂಗ. ವ್ಯೋಮ ತರಂಗ

ಆಕಾಶದ ನೀಲಿಮೆ

(ಪವಿ) ಸೂರ್ಯ ಕಿರಣಗಳು ವಾಯುಮಂಡಲವನ್ನು ಹಾದುಬರುವಾಗ ಅದರಲ್ಲಿಯ ಅನಿಲಗಳ ಅಣುಗಳು ಮತ್ತು ದೂಳಿನ ಕಣಗಳು ಬೆಳಕನ್ನು ಚದರಿಸುತ್ತವೆ. ಈ ಚದರಿಕೆ ದೀರ್ಘ ಅಲೆಗಳಿಗಿಂತ (ಕೆಂಪು ಭಾಗ) ಹ್ರಸ್ವ ಅಲೆಗಳಲ್ಲಿ (ನೀಲಿ ಭಾಗ) ಅಧಿಕ. ಎಂದೇ ಚದರಿದ ಬೆಳಕಿನಲ್ಲಿ ಹ್ರಸ್ವ ಅಲೆಗಳು (ನೀಲ, ಗಾಢ ನೀಲ ಮತ್ತು ನೇರಿಳೆ) ಪ್ರಧಾನವಾಗಿದ್ದು ಒಟ್ಟಾರೆ ಗಗನಕ್ಕೆ ನೀಲವರ್ಣದ ತೆಳುಲೇಪನ ಮಾಡಿದಂತೆ ಕಾಣುತ್ತದೆ

ಆಕಾಶನೌಕೆ

(ತಂ) ಭೂಮಿಯ ಸುತ್ತ ಕಕ್ಷೆಯಲ್ಲಿ ಅಥವಾ ಮತ್ತೊಂದು ಆಕಾಶಕಾಯದ ಪ್ರಕ್ಷೇಪಪಥದಲ್ಲಿರಿಸಲು ರಚಿತ ವಾದ ಮಾನವಚಾಲಿತ ಅಥವಾ ಸ್ವಯಂಚಾಲಿತ ಸಾಧನ. ಇದು ಉದ್ದಿಷ್ಟ ಆಕಾಶ ಸಂಶೋಧನೆಗೆ ಅವಶ್ಯವಾದ ಪೇಲೋಡ್‌ನ (ಪಾವತಿ ಹೊರೆ) ಉಪವ್ಯವಸ್ಥೆ ಗಳನ್ನು ಒಳಗೊಂಡಿರುತ್ತದೆ. ಅಂತರಿಕ್ಷ ನೌಕೆ, ವ್ಯೋಮನೌಕೆ

ಆಕಾಶಯಾನ

(ಅಂವಿ) ರಾಕೆಟ್‌ಗಳ ನೆರವಿನಿಂದ ಯುಕ್ತ ಕಕ್ಷೆಯಲ್ಲಿರಿಸಿದ ಆಕಾಶ ನೌಕೆಗಳಲ್ಲಿ ಕುಳಿತು ನಡೆಸುವ ಪರ್ಯಟನೆ. ಆಕಾಶ ಸಂಶೋಧನೆ ಇದರ ಗುರಿ. ಆರಂಭದಲ್ಲಿ ಕೆಲ ದಿನಗಳ ಯಾನದ ಬಳಿಕ ವ್ಯೋಮ ಯಾತ್ರಿಗಳು ಅದೇ ನೌಕೆಯಲ್ಲಿ ಭೂಮಿಗೆ ಹಿಂದಿರುಗುತ್ತಿದ್ದರು. ಈಗ ಆಕಾಶದಲ್ಲೇ ನೆಲೆಗೊಳಿಸಿದ ನಿಲ್ದಾಣಗಳಲ್ಲಿ ಮಾನವ ವರ್ಷಕ್ಕೂ ಹೆಚ್ಚು ಕಾಲ ಯಾನ ಮಾಡುತ್ತ ಸಂಶೋಧನೆ ನಡೆಸಬಲ್ಲ. ಸ್ಪೇಸ್ ಷಟಲ್‌ಗಳು ಅವಶ್ಯ ಸಾಮಗ್ರಿ ಗಳನ್ನು ಆಗಾಗ್ಗೆ ಒದಗಿಸುತ್ತ ತಂಡ ತಂಡಗಳಲ್ಲಿ ಖಗೋಳ ಯಾತ್ರಿ ಗಳನ್ನು ನಿಲ್ದಾಣಕ್ಕೆ ಒಯ್ಯುತ್ತವೆ ಹಾಗೂ ಅಲ್ಲಿಂದ ಅವರನ್ನು ಮರಳಿ ಭೂಮಿಗೆ ಕರೆತರುತ್ತವೆ. ಅಂತರಿಕ್ಷಯಾನ, ವ್ಯೋಮಯಾನ

ಆಕಾಶಯಾನ ವಿಜ್ಞಾನ

(ಅಂವಿ) ವಾಯುಮಂಡಲಾತೀತ ಆಕಾಶದಲ್ಲಿ ನಡೆಸುವ ಯಾನದ ಕುರಿತ ವೈಜ್ಞಾನಿಕ ಅಧ್ಯಯನ

ಆಕುಂಚಿಸು

(ತಂ) ಯಾವುದೇ ಪದಾರ್ಥದ ಅಥವಾ ಶರೀರದ ಒಂದು ಭಾಗವನ್ನು (ಉದಾ: ನಾಲಗೆಯನ್ನು) ಹಿಂದಕ್ಕೆ ಅಥವಾ ಒಳಕ್ಕೆ ಎಳೆದುಕೊಳ್ಳುವುದು. ಮುದುರಿಕೊಳ್ಳುವುದು

ಆಕೃತಿ

(ಗ) ರೇಖೆ, ಬಿಂದು, ತಲ ಇತ್ಯಾದಿಗಳ ಸಂಯೋಜನೆ

ಆಕೃತಿ

(ರ) ರೂಪರೇಖೆ, ವಿನ್ಯಾಸ. ಅಣುವಿನಲ್ಲಿಯ ಪರಮಾಣುಗಳು ೩ ಆಯಾಮಗಳಲ್ಲಿ ವಿನ್ಯಾಸಗೊಂಡಿರುವ ಬಗೆ

ಆಂಕೊಸೆರ್ಕಿಯಾಸಿಸ್

(ವೈ) ಪಶ್ಚಿಮ ಆಫ್ರಿಕದಲ್ಲಿ ಆಂಕೊಸರ್ಕವೊಲ್ವುಯಿಯಸ್ ಜಾತಿಯ ಜಂತುಹುಳುಗಳಿಂದ ಮಾನವನ ಚರ್ಮಕ್ಕೂ ಉಪಚರ್ಮದ ಊತಕಗಳಿಗೂ ತಗುಲುವ ಸೋಂಕು ರೋಗ

ಆಂಕೋಜೀನ್

(ಜೀ) ಕ್ಯಾನ್ಸರ್‌ಕಾರಕ ಜೀನ್. ಸೂಕ್ತ ಪರಿಸರದಲ್ಲಿ ಪ್ರಚೋದನೆಗೊಂಡು ಜೀವಕೋಶವೊಂದನ್ನು ಗಂತಿಕೋಶವಾಗಿ ಪರಿವರ್ತಿಸಬಲ್ಲ ರೋಗಕಾರಕ ಜೀನ್
< previous1234567891718Next >

Search Dictionaries

Loading Results

Follow Us :   
  Download Bharatavani App
  Bharatavani Windows App