भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (English-Kannada-Kannada)(KASAPA)

Kannada Sahitya Parishattu (KASAPA)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Facing tile

(n)

Tile designed for use on interior walls.
ಮನೆಯ ಒಳಗೋಡೆಗಳಿಗೆ ಹೊದಿಸುವ ಅಂದಚೆಂದದ ಹಂಚು, ಗೋಡೆ ಬಿಲ್ಲೆ, ಗೋಡೆ ಹಂಚು.

Faience

(n)

A French term for ear then ware probably referring to the tin enameled earthen ware of Faenyain Italy.
ಮಣ್ಣಿನ ಮಡಕೆ, ಕುಡಿಕೆಗಳಿಗೆ ಬಳಸುತ್ತಿದ್ದ ಫ್ರೆಂಚ್ ಶಬ್ದ ಇಟಲಿಯ ಮೂಲದ್ದು, ಇಂಗ್ಲೆಂಡಿನಲ್ಲಿ ವಾಸ್ತು ಶಿಲ್ಪಕ್ಕಾಗಿ ಬಳಸುತ್ತಿರುವ ಸ್ಲ್ಯಾಬ್ ಮತ್ತು ಬ್ಲಾಕ್-ಗಳಿಗಾಗಿ ಈ ಶಬ್ದ ಈಗ ಪ್ರಯೋಗದಲ್ಲಿದೆ.

Feather coming

(ad)

Drawing a tip of a feather across lines of wet slip to make pattern.
ಇದೊಂದು ಬಗೆಯ ಕುಂಭಾಲಂಕರಣ ಅರೆ ಹಸಿ ಮಡಕೆಯ ಮೇಲೆ ಸವರಿದ ಮಣ್ಣಿನ ದ್ರವದ ಮೇಲೆ ಬಾಚುವುದು.

Feldspar(Felspar)

(n)

NA
ಅಗ್ನಿಶಿಲೆಗಳ ವರ್ಗೀಕರಣಕ್ಕೆ ಅಗತ್ಯವಾದ ಒಂದು ಪ್ರಮುಖ ಖನಿಜ. ಇದರ ರಾಸಾಯನಿಕ ಶಿಥಿಲತೆಯಿಂದ ಬಿಳಿಜೇಡು ಉತ್ಪತ್ತಿಯಾಗುತ್ತದೆ.

Fettle line

(n)

The seam line on a pot resulting from the meeting of two pots of plaster mould.
ಪ್ಲಾಸ್ಟರ್ ಅಚ್ಚಿನ ಮಡಕೆಗಳಲ್ಲಿ ಎರಡು ಮಡಕೆಗಳು ಒಂದಕ್ಕೊಂದು ಸೇರಿದಾಗ, ಉಂಟಾಗುವ ಕಲೆ, ಗುರುತು.

Filler

(n)

Non plastic material such as grog, pitchers etc., which ever added to clay bodies to promote drying and shrinkage.
ಮಿದುಣತ್ವಗುಣವಿಲ್ಲದ ಬೂದಿ, ಮರಳು, ರಾಳ ಮುಂತಾದ ವಸ್ತುಗಳು. ಹಸಿ ಮಡಕೆಗಳು ಒಣಗಲು ಹಾಗೂ ಉಡುಗುವದನ್ನು ತಡೆಗಟ್ಟಲು ಮಡಕೆ ಮಾಡುವ ಮಣ್ಣಿಗೆ ಮಿಶ್ರ ಮಾಡುವವರು.

Fire clay

(n)

This is secondary so called because it is found in the region of coal seams. It is highly refractory.
ಕಾವುಜೇಡಿ, ಜಲಜಿಶಿಲೆಯಿಂದ ಉಂಟಾದ ಮಣ್ಣು, ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು.

Firing

(v)

The controlled application of heat to clay and glaze to effect the necessary chemical changes required for production of pottery.
ಆವಿಗೆ ಸುಡುವುದು, ಆವಿಗೆಯಲ್ಲಿ ಹಸಿಮಣ್ಣಿನ ಮಡಕೆಗಳನ್ನಿಟ್ಟು ಸುಡುವುದು, ಕಾವಿನಿಂದ ಗಾಜಿನಂಥ ವಸ್ತುಗಳನ್ನು ಕರಗಿಸಿ ಹೊಳಪು ಮೈಭರಿಸುವದು.

Flaring

(ad)

Glitter
ಹೊಳೆಯುವ, ಮಡಕೆಗಳನ್ನು ಅರೆ ಹಸಿ ಇರುವಾಗ ಉಜ್ಜಿ ನುಣುಪುಗೊಳಿಸಿ ಹೊಳೆಯುವಂತೆ ಮಾಡುವದು. ಗ್ಲೇಸಿಂಗ್ ವಿಧಾನದಿಂದ ಕುಂಭ ವಸ್ತುಗಳನ್ನು ಹೊಳೆಯುವಂತೆ ಮಾಡುವರು.

Flat clay

(n)

A plastic clay such as ball clay.
ಅಧಿಕ ಮಿದುತ್ವವುಳ್ಳಮಣ್ಣು ಉಂಡೇಜೇಡು, ಅದಕ್ಕೆ ವಿರೋಧವಾಗಿ ಕಡಿಮೆ ಮಿದುತ್ವದ ಮಣ್ಣು.

Flat ware

(n)

The collective term for items of pottery such as plates, and shallow dishes or bowls which are broad and open in form complete hollow ware.
ತಟ್ಟೆ, ಕಿರಿದಾದ ಬೋಗುಣಿ, ಮುಂತಾದ ತೆರೆದ ಅಗಲಬಾಯುಳ್ಳ ಮಡಕೆಗಳು.

Flint

(n)

silica
ಮರಳು, ಹೊಯಿಗೆ ಉಸುಕು, ಮಣ್ಣನ್ನು ಹದಗೊಳಿಸಲು ಮರಳನ್ನು ಮಣ್ಣಿಗೆ ಬೆರಸುವರು.

flue

(n)

The passage way for the flames in kiln.
ಆವಿಗೆಯ ಜ್ವಾಲೆಗಳು ಹೊರಗೆ ಹೋಗುವ ದಾರಿ.

Flux

(n)

An ingredient in a clay body or glaze which lowers the melting point of the ingredients.
ಮಡಕೆ ಮಣ್ಣು ಅಥವಾ ಗ್ಲೇಸ್-ನಲ್ಲಿರುವ ಘಟಕಗಳಲ್ಲಿನ ಸ್ರಾವಕ, ಇತರ ಘಟಕಗಳೊಡನೆ ಸೇರಿ ದ್ರವವಾಗಿಸುವ ಕ್ರಿಯೆಯಲ್ಲಿ ನೆರವಾಗುತ್ತದೆ. ಯಾವುದೇ ಗ್ಲೇಸ್ ಮಾಡಲು ಕೂಡ ಸ್ರಾವಕಬೇಕು ಗ್ಲೇಸಿನ ಗುಣ ನಿರ್ಧಾರವಾಗುವುದು ಈ ಸ್ರಾವಕದಿಂದಲೆ.

Folk art

(n)

folk craft, handed down by tradition of the people.
ವಂಶಮಾರಂಪರ್ಯವಾಗಿ ಬಂದ ವೃತ್ತಿಗಳು, ಕಲೆಗಳು ಉದಾ: ಗ್ರಾಮೀಣ ವೃತ್ತಿಗಳಾದ ಕುಂಬಾರಿಕೆ, ಚಮ್ಮಾರಿಕೆ, ಇತ್ಯಾದಿ.

Foot ring

(n)

A circle of clay left while turning or trimming the base of a pot and which allows pot to stand evenly.
ತಿಗುರಿಯಿಂದ ಮಡಕೆಯನ್ನು ಗೇಯುವಾಗ ಕೆಳಗೆ ಉಳಿಯುವ ಬಳೆ ಆಕಾರದ ಮಣ್ಣಿನ ಸಿಂಬೆ. ಆ ಸಿಂಬೆ ಗೇಯುತ್ತಿರುವ ಮಡಕೆಗಿಂತ ಸ್ವಲ್ಪ ಅಗಲವಾಗಿರುತ್ತದೆ. ಮಡಕೆ ಸ್ಥಿರವಾಗಿ ನಿಲ್ಲಲ್ಲು ಅದರಿಂದ ಅನುಕೂಲವಾಗುತ್ತದೆ.

Form

(v)

A word often confused with shape properly the form of an object is the combination of all the characteristics that establish its identity. Form not only includes shape but also aspects such as size texture colour, time and movement.
ಆಕಾರ ಕೊಡು, ರೂಪಿಸು, ಚಿತ್ರದ ಅಂಗಭಾಗಗಳ ವ್ಯವಸ್ಥೆ, ಅಳತೆ, ರಚನೆ, ಇದೆಲ್ಲವನ್ನು ಒಳಗೊಂಡ ವಸ್ತು, ಕಲಾಪ್ರದರ್ಶನಗಳನ್ನು ಏರ್ಪಡಿಸುವಾಗ ‘ಫಾರಂ’ ಬಹಳ ಮುಖ್ಯ.

Search Dictionaries

Loading Results

Follow Us :   
  Download Bharatavani App
  Bharatavani Windows App