भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous12Next >

ಬಂಗರಿ

(ನಾ)
ಬಂಗ್ರಿ, ಸಿಹಿ ಅಡಿಗೆ ಮಾಡುವ ಪಾತ್ರೆ, ಕಡುಬು, ಗಿಣ್ಣು ಕುಚ್ಚ ಕಡುಬು ಮೊದಲಾದ ಅಡುಗೆ ಮಾಡಲು ಬಳಸುವ ಮುಚ್ಚಳವಿರುವ ದುಂಡು ಪಾತ್ರೆ.

ಬಂಗ್ಲ

(ನಾ)
ದೊಡ್ಡ ಗಾತ್ರದ ಗಡಿಗೆ ಉತ್ತರ ಕನ್ನಡ ಜಿಲ್ಲೆಯ ಅಗೇರರು ಬಳಸುವ ಭಾಷೆ.

ಬಂಡಿ ಕುಡಗೋಲು

(ನಾ)
ಆವಿಗೆಗೆ ಬೇಕಾದ ಉರುವಲು, ಕಂಟಿ, ಮುಳ್ಳು, ಪೊದೆಗಳನ್ನು ಕೊಯ್ಯಲು ಉಪಯೋಗಿಸುವ ದೊಡ್ಡ ಗಾತ್ರದ ಕುಡಗೋಲು.

ಬಂದ್ಲ

(ನಾ)
ತಿಗುರಿಯ ಮೇಲೆ ತಯಾರಿಸಿದ ನೀರು ಕಾಯಿಸುವ ಪಚೇಲಿ ಹತ್ತರಿಂದ ಐವತ್ತು ಲೀಟರ್ ನೀರು ಹಿಡಿಯ ಬಲ್ಲದು ಇದರ ವಿಶೇಷವೆಂದರೆ ಇದರ ತಳವನ್ನು ಬಹಳ ತೆಳುವಾಗಿ ಮಾಡುವರು. ಇದರಿಂದಾಗಿ ನೀರು ಬೇಗನೆ ಕಾಯುತ್ತದೆ.

ಬಟ್ಟಲು

(ಕ್ರಿ)
ದುಂಡಾದ ಮಣ್ಣಿನ ಪಾತ್ರೆ

ಬಡಿ

(ನಾ)
ತಟ್ಟು

ಬಡಿಗಲ್ಲು

(ನಾ)
ತಟ್ಟುವ ಕಲ್ಲು, ಕುಂಬಾರರು ಹಸಿ ಮಡಿಕೆಗಳಿಗೆ ರೂಪ ಕೊಡಲು ಕಲ್ಲು ಮತ್ತು ಸೊಳದಿಂದ ತಟ್ಟುವರು.

ಬತ್ತಿಸ್ಥಾಪಕ

(ನಾ)
ಊದಬತ್ತಿ, ಮೇಣದಬತ್ತಿ ಹಚ್ಚಿ ಇಡಲು ಮಾಡಿದ ಸಾಧನ, ಪಿಂಗಾಣಿ ವಸ್ತುಗಳಲ್ಲಿ ಇದನ್ನು ಕಾಣಬಹುದು.

ಬಲಗೊಂಬಿ

(ನಾ)
ಮಣ್ಣಿನ ಗೊಂಬೆ, ಅರಿಶಿಣ – ಕುಂಕುಮ ಸವರಿ ನಿವಾಳಿಸಿ ಊರ ಹೊರಗೆ ಒಗೆಯುವ ನಿವಾರಣೆ ಗೊಂಬಿ, ಮಾಂತ್ರಿಕರು ಬಳಸುವರು.

ಬಸಿಪೈಪು

(ನಾ)
ಮಣ್ಣಿನ ಪೈಪು, ಸುಮಾರು ಮೂವತ್ತು ಸೆಂ.ಮೀ.ನಿಂದ ಎರಡು ಮೀ. ಉದ್ದದವರೆಗೂ ಇದನ್ನು ತಯಾರಿಸುವರು. ರೈತರು ಭೂಮಿಯಲ್ಲಿ ಜವಳು ಹತ್ತಿದಾಗ ನೀರನ್ನು ಹರಿಬಿಡಲು ಬಳಸುವರು. ದಾವಣಗೆರೆ, ಶಿವಮೊಗ್ಗಾ, ರಾಯಚೂರ ಜಿಲ್ಲೆಗಳ ರೈತರು ತಮ್ಮ ಗದ್ದೆಗಳಲ್ಲಿ ಬಸಿ ಪೈಪನ್ನು ಹೆಚ್ಚಾಗಿ ಬಳಸುವರು.

ಬಾಣಲಿ

(ನಾ)
ಬಾಳ್ಳಿ, ಬಾಂಡಲೆ, ತಟ್ಟೆ, ಕಬ್ಬಿಣ ಬುಟ್ಟಿ ಆಕಾರದಲ್ಲಿರುವ ಮಣ್ಣಿನ ಪಾತ್ರೆ, ಆಹಾರ ಪದಾರ್ಥಗಳನ್ನು ಕರಿಯಲು ಬಳಸುತ್ತಿದ್ದು ಈ ಪಾತ್ರೆ ಕ್ರಮೇಣವಾಗಿ ಕಣ್ಮರೆಯಾಗುತ್ತಲಿದೆ.

ಬ್ಯಾಕೋಲು

(ನಾ)
ಆವಿಗೆ ಸುಡುವಾಗ ಉರುವಲನ್ನು ಒಳಗೆ ತಳ್ಳಲು ಮತ್ತು ಕಿಚ್ಚನ್ನು ತಳ್ಳಲು ಬಳಸುವ ಕಟ್ಟಿಗೆಯ ಕೋಲು. ನೋಡಿ – ಕವೆಗೋಲು

ಬಾದಾಳ

(ನಾ)
ಬಯಲು ಸೀಮೆಯಲ್ಲಿ ಮಣ್ಣಿನ ಮಾಳಿಗೆಯ ಮನೆಗಳು ಒತ್ತೊತ್ತಾಗಿರುತ್ತವೆ. ಕಿಟಕಿಗಳೇ ಇರುವುದಿಲ್ಲ. ಗಾಳಿ ಬೆಳಕು ಮಾಳಿಗೆಯಲ್ಲಿಟ್ಟ ಬಾದಾಳಿದಿಂದಲೇ ಬರಬೇಕು. ನೋಡಿ – ಬೆಳಕಿಂಡಿ.
‘ಬಲುಗಜಕ್ಕೆ ಬಾದಾಳದಲ್ಲಿ ಹಾದಿಯುಂಟೆ?’ (ಬಿಬ್ಬಿ ಬಾಚಯ್ಯ)

ಬಾದಾಳ ಹಂಚು

(ನಾ)
ಬಾದಾಳಕ್ಕೆ ಮುಚ್ಚುವ ಹಂಚು ಮಳೆ ಬರುವಾಗ ನೀರು ಒಳಗೆ ಬೀಳದಿರಲೆಂದು ಮಡಕೆಯ ಒಡೆದ ಬೋಕಿಗಳನ್ನು ಬಾದಾಳದ ಬಾಯಿಗೆ ಮುಚ್ಚುವರು.

ಬಾನ

(ನಾ)
ಗಾತ್ರಕ್ಕೆ ತಕ್ಕಂತೆ ಒಂದರ ಮೇಲೊಂದು ಓತಿಟ್ಟ ಪಾತ್ರೆ ಸಾಲು ಅಡಕಲು ಗಡಿಗೆ.

ಬಾನಿ

(ನಾ)
ಬಾನೆ, ಕಲಗಂಚು, ಅಗಲ ಬಾಯಿಯ ಪಾತ್ರೆ, ಮಣ್ಣಿನ ಬಾನಿಯನ್ನು ಹಳ್ಳಿಗಳಲ್ಲಿ ಮುಸುರಿ ಬಾನಿಯಾಗಿ ದನಕರುಗಳಿಗೆ ನೀರು ಕುಡಿಯಲು, ಹೀಗೆ ಬೇರೆ ಕೆಲಸಗಳಿಗೆ ಬಳಸುವರು. ಬಾನಿಯನ್ನು ದುಂಡಾಕೃತಿ ಚೌಕಾಕೃತಿ, ಆಯತ, ಬಕೆಟ್ ಆಕೃತಿಯಲ್ಲಿ ಕೈಯಿಂದಲೆ ತೀಡಿ ಮಾಡುವರು.

ಬಿಂದಿಗೆ

(ನಾ)
ಮಣ್ಣಿನ ಚಿಕ್ಕ ಕೊಡ, ಹಳ್ಳಿಗಳಲ್ಲಿ ಕೆರೆ – ಬಾವಿಗಳಿಂದ ನೀರು ತರಲು ಸಾಮಾನ್ಯವಾಗಿ ಬಡವರು, ಬಿಂದಿಗೆ ಮಣ್ಣಿನ ಕೊಡಗಳನ್ನು ಬಳಸುವರು. ಮಣ್ಣಿನ ಕೊಡಗಳಲ್ಲಿ ಚಿಕ್ಕ ಕೊಡಕ್ಕೆ ಬಿಂದಿಗೆ ಎಂದು ಹೆಸರು. ಇತ್ತೀಚಿನ ದಿನಗಳಲ್ಲಿ ತಾಮ್ರದ, ತಗಡಿನ ಮತ್ತು ಪ್ಲಾಸ್ಟಿಕ್ ಬಿಂದಿಗೆಗಳು ಹೆಚ್ಚು ಬಳಕೆಯಲ್ಲಿವೆ.
‘ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ ತಾರೆ ಬಿಂದಿಗೆಯ’ (ಪುರಂದರದಾಸರು)
‘ಬಿಂದಿಗೆ ತೆಗೆದಾಳೋ ಬಾವಿ ನೀರಿಗೆ ಹೊಂಟಾಳೋ’ (ಜಾನಪದ)
ಬಿಂದಿಗೆ ಒಡೆದರೆ ಹಂದಿಗೆ ನೀರು ಎಲ್ಲಿ? (ಗಾದೆ)
ಹೋಗ್ತಾ ಬಾಣಂತಿ ಬರತಾ ಬಸುರಿ (ಒಗಟು)

ಬಿಳಿಮಣ್ಣು

(ನಾ)
ಮಡಿಕೆ ಮಾಡಲು ಬಳಸುವ ಬಿಳಿಮಣ್ಣು, ಚೈನಾಕ್ಲೇ – ಬಿಳಿಮಣ್ಣನ್ನು ಪಿಂಗಾಣಿ ಪಾತ್ರೆಗಳನ್ನು ತಯಾರಿಸಲು ಬಳಸುವರು. ಈ ಮಣ್ಣಿನಿಂದ ತಯಾರಿಸಿದ ವಸ್ತುಗಳು ಹೆಚ್ಚು ಗಟ್ಟಿಯಾಗಿರುವವು – ವಿದ್ಯುತ್ ನಿರೋಧಕ ವಸ್ತುಗಳನ್ನು ತಯಾರಿಸಲು ಈ ಮಣ್ಣನ್ನು ಬಳಸುವರು.

ಬೆಚ್ಚಗಡಿಗೆ

(ನಾ)
ಹೊಲಗದ್ದೆಗಳಲ್ಲಿ ಹಕ್ಕಿಗಳನ್ನು ಓಡಿಸಲು ಮತ್ತು ಪಕ್ಷಿಗಳು ಬರದಂತೆ ನಿವಾರಣೆಗಾಗಿ ನಿಲ್ಲಿಸುವ ಮನುಷ್ಯಮುಖದ ಮಣ್ಣಿನ ಗಡಿಗೆ, ಸಾಮಾನ್ಯವಾಗಿ ಹುಲ್ಲು ತುಂಬಿದ ಮನುಷ್ಯ ಆಕಾರದ ಬೊಂಬೆಯನ್ನು ಮಾಡಿ ಅದಕ್ಕೆ ಬೆಚ್ಚ ಗಡಿಗೆಯನ್ನು ಹಾಕುವರು. ಮತ್ತು ನೋಡಿದವರು ಹೆದರುವಂತೆ ಅದರ ಮುಖಕ್ಕೆ ಸುಣ್ಣ ಮತ್ತು ಕಾವಿ ಮಣ್ಣನ್ನು ಬಳೆಯುವರು. ನೋಡಿ – ಬೆದರುಗೊಂಬೆ.

ಬೆಡಗಿನ ಹಂಚು

(ನಾ)
ದಬ್ಬೆ ಹಂಚು, ದಂಬೆ ಹಂಚು (Ridge Tile) ಮಾಳಿಗೆಗೆ ಹೊದಿಸಲು ಬಳಸುವ ಹಂಚು. ಈ ಹಂಚುಗಳು 2-3 ಸೆಂ.ಮಿ. ದಪ್ಪ ಮತ್ತು ಸುಮಾರು 45 ಸೆಂ. ಮಿ. ಉದ್ದ ಇರುತ್ತವೆ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App