भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಟ್ವಾಳ

ಬಟ್ಟೆ ತೊಳೆಯಲು ಉಪಯೋಗಿಸುವ ನೊರೆ
ಬರುವ ಕಾಯಿ, ಜಾನುವಾರುಗಳು ಕಾಯನ್ನು ತಿನ್ನುತ್ತವೆ.

ಅಂಟಿಸು

ಹಚ್ಚು, ಅಂಟಿಕೊಳ್ಳವಂತೆ ಮಾಡು.

ಅಂಟ್ಗಿ-ಪಂಟ್ಗಿ

ಮಲೆನಾಡಿನ ವೈಶಿಷ್ಟ್ಯಗಳಲ್ಲೊಂದು, ದೀಪಾವಳಿಯಲ್ಲಿ ಮನೆ ಮನೆಗೆ
ಹೋಗಿ, ಹಾಡುತ್ತಾ ಜ್ಯೋತಿಯನ್ನು ನೀಡುವ ಜಾನಪದ ಮೇಳ.

ಅಂಟು

ಜಿಗುಟು, ಮುಟ್ಟಿದರೆ ಅಂಟಿಕೊಳ್ಳುವ ವಸ್ತು.

ಅಂಟು ಪುರ್ಲೆ

ಮುಟ್ಟಿದರೆ ಅಂಟಿಕೊಳ್ಳುವ ತೆನೆಯುಳ್ಳ ಒಂದು ಬಗೆಯ ಹುಲ್ಲು / ಗಿಡ

ಅಂಟ್ರೋಗ

ಅಂಟುರೋಗ, ಒಬ್ಬರಿಂದೊಬ್ವರಿಗೆ ಹರಡುವ ಜಾಡ್ಯ.

ಅಂಡ ಚಂಡಾಳ

ಚೇಷ್ಟೆ, ಕುಯುಕ್ತಿ

ಅಂಡ ಚಂಡಾಳ

ಕುಯುಕ್ತಿ ಮಾಡುವವನು.

ಅಂಡಲ್ಲಿ

ಅಡಿಯಲ್ಲಿ, ತಳದಲ್ಲಿ, ಕೆಳಗೆ.

ಅಂಡಲೆ

ಸುಮ್ಮನೆ ಕೆಲಸ ಕಾರ್ಯವಿಲ್ಲದೆ ಓಡಾಡುವುದು.

ಅಂಡಾದುಂಡಿ

ಬೇಕಾಬಿಟ್ಟಿ, ದುಂದು ವೆಚ್ಟ.

ಅಂಡುಕುಸ್ಕ

ಉದ್ದನೆಯ ಕಾಲುಳ್ಳ ಗುಬ್ಬಿಯಂತಹ ಹಕ್ಕಿ.

ಅಂಡುಸುಟ್ಟ ಬೆಕ್ಕಿನಂತೆ

ಕೂತಲ್ಲಿ ಕೂರದೇ ತಿರುಗುವುದು.

ಅಂಡುಸವ್ಸು

ಕೆಲಸಮಾಡದೆ ಸೋಮಾರಿಯಾಗಿ ಕುಳಿತಿರುವುದು.

ಅಂಡುಹಿಡಿ

ತಳಹಿಡಿ, ಸೀದುಹೋಗು.

ಅಂಡೂರು

ತಳವೂರು, ಕುಳಿತುಕೊಳ್ಳವುದು.

ಅಂಡೆ

ಲೋಹ / ಬಿದಿರಿನ ಟೊಳ್ಳಾದ ಉದ್ದಪಾತ್ರೆ

ಅಂಡೆ

ತಿರುಪು, ಓಲೆ /ಮೂಗುತಿಯ ಪಾಣಿ.

ಅಂಡೊಡಕ

ಅಡಿಕೆಗೆ ತಗಲುವ ಒಂದು ರೋಗ.

ಅಂತ

ಹಾಗಂತ, ಹಾಗೆಂದು, ಆ ರೀತಿ, ಆ ಬಗೆ.

Search Dictionaries

Loading Results

Follow Us :   
  Download Bharatavani App
  Bharatavani Windows App